ಲಾರ್ಡ್ಸ್ ನಲ್ಲಿ ನಾಯಕನಾಗಿ ಪಾದಾರ್ಪಣಾ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಚೇತೇಶ್ವರ ಪೂಜಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸಸೆಕ್ಸ್‌ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದದಲ್ಲೇ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಭರ್ಜರಿ ಶತಕ(115*) ಸಿಡಿಸಿ ಮಿಂಚಿದ್ದಾರೆ. ಇಂಗೆಂಡ್‌ ನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪೂಜಾರ ಅಮೋಘ ಶತಕದ ಬಲದಿಂದ ಸಸೆಕ್ಸ್‌ 4 ವಿಕೆಟ್‌ ಗಳ ನಷ್ಟಕ್ಕೆ 338 ರನ್‌ ಗಳ ಭರ್ಜರಿ ಮೊತ್ತ ಕಲೆಹಾಕಿದೆ. ಸಸೆಕ್ಸ್ ನಾಯಕ ಟಾಮ್ ಹೈನ್ಸ್ ಗಾಯಗೊಂಡ ಹಿನ್ನೆಲೆಯಲ್ಲಿ ಪೂಜಾರಗೆ ನಾಯಕತ್ವ ಜವಾಬ್ದಾರಿ ವಹಿಸಲಾಗಿದೆ.
ಇನ್ನೂ 5-6 ತಿಂಗಳು ಪೂಜಾರ ತಂಡದ ನಾಯಕತ್ವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಂಡದ ಮ್ಯಾನೇಜ್‌ ಮೆಂಟ್‌ ತಿಳಿಸಿದೆ. ಕಳಪೆ ಫಾರ್ಮ್‌ ನಿಂದ ಹೊರಬರಲು ಫೂಜಾರ ಕೌಂಟಿ ಕ್ರಿಕೆಟ್‌ ನಲ್ಲಿ ಪಾಲ್ಗೊಂಡಿದ್ದಾರೆ. ಸಸೆಕ್ಸ್‌ ಪರವಾಗಿ ಭರ್ಜರಿ ಫಾರ್ಮ್‌ ಪ್ರದರ್ಶಿಸಿರುವ ಪೂಜಾರ ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ.  ಅವುಗಳಲ್ಲಿ ಎರಡು ದ್ವಿಶತಕ ಸಹ ಸೇರಿದ್ದು, ಒಟ್ಟಾರೆ  720 ರನ್ ಗಳಿಸಿದ್ದಾರೆ. ಔಟಾಗದೆ 6, 201, 109, 12, 203, 16, 170* ಮತ್ತು 3 ರನ್‌ ಸಿಡಿಸುವುದರ ಮೂಲಕ ಸಸೆಕ್ಸ್‌ ತಂಡದ ಬ್ಯಾಟಿಂಗ್‌ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಈ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದಾರೆ.
ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಮುಗಿದ ನಂತರ, ಲೀಸೆಸ್ಟರ್‌ಶೈರ್ ವಿರುದ್ಧದ ಪಂದ್ಯಕ್ಕಾಗಿ ಪೂಜಾರ ಮರಳಿ ಸಸೆಕ್ಸ್‌ ತಂಡ ಸೇರಿದ್ದಾರೆ. ಅವರ ಅತ್ಯತ್ತವ ಪ್ರದರ್ಶನ ಹಾಗೂ ಅಪಾರ ಅನುಭವವನ್ನು ಪರಿಗಣಿಸಿ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
34 ವರ್ಷದ ಭಾರತೀಯ ಬ್ಯಾಟರ್ ಪೂಜಾರ ಈ ಹಿಂದೆ ದೇಶಿಯ ಕ್ರಿಕೆಟ್‌ ನಲ್ಲಿ ಸೌರಾಷ್ಟ್ರ, ರೆಸ್ಟ್ ಆಫ್ ಇಂಡಿಯಾ, ವೆಸ್ಟ್ ಝೋನ್, ಭಾರತ ಎ ಮತ್ತು ಬಿ ತಂಡವನ್ನು  ಮುನ್ನಡೆಸಿದ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!