ರಕ್ಷಣಾ ತಂಡದಿಂದ ಯಶಸ್ವೀ ಕಾರ್ಯಾಚರಣೆ: 4ದಿನಗಳ ಬಳಿಕ ಬಾಲಕನ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಛತ್ತೀಸ್‌ಘಡದಲ್ಲಿ ಕಳವೆ ಬಾವಿಗೆ ಬಿದ್ದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಮಾರು ನಾಲ್ಕೂವರೆ ದಿನಗಳ ಕಾಲ (110 ಗಂಟೆ) ಸತತ ಪ್ರಯತ್ನದಿಂದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಬಾಲಕನನ್ನು ರಕ್ಷಿಸಿದ್ದಾರೆ. ಛತ್ತೀಸ್‌ಗಢದ ಪಿಹ್ರಿದ್ ಗ್ರಾಮದ ರಾಹುಲ್ ಸಾಹು ಎಂಬ ಹನ್ನೊಂದು ವರ್ಷದ ಬಾಲಕ ಶುಕ್ರವಾರ ಸಂಜೆ ಆಟವಾಡುತ್ತಾ ಕೊಳವೆ ಬಾವಿಯಲ್ಲಿ ಬಿದ್ದಿದ್ದ.

ಅಂದಿನಿಂದ ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ರಕ್ಷಣಾ ತಂಡ ಬಾಲಕನ ರಕ್ಷಣೆಗೆ ತೀವ್ರ ನಿಗಾ ವಹಿಸಿದ್ದರು. ಛತ್ತೀಸ್‌ಘಡದ ಸಿಎಂ ಕೂಡ ಬಾಲಕನ ಬಗ್ಗೆ ಕಾಲಕಾಲಕ್ಕೆ ವಿಚಾರಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಟಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಜೊತೆಗೆ ಸೇನೆ ಮತ್ತು ಪೊಲೀಸರು 80 ಅಡಿ ಆಳದ ಕೊಳವೆಬಾವಿಗೆ ಸುರಂಗ ತೋಡಿ ಬಾಲಕನನ್ನು ಹೊರತಂದಿದ್ದಾರೆ.  ಅಂತೂ ಮಂಗಳವಾರ ರಾತ್ರಿ ವೇಳೆಗೆ ಬಾಲಕನನ್ನು ಹೊರತೆಗೆದಿದ್ದಾರೆ. ಬಾಲಕನಿಂದ ಯಾವುದೇ ಚಲನವಲನ ವ್ಯಕ್ತವಾಗದ ಕಾರಣ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಕೆಲ ಸಮಯದ ಬಳಿಕ ಊಟ ಬೇಕೆಂದು ಸನ್ನೆ ಮೂಲಕ ಕೇಳಿದ್ದಾನೆ. ಬಾಲಕನ ಈ ಪ್ರತಿಕ್ರಿಯೆಯಿಂದ ಸಂತೋಷಗೊಂಡ ಅಧಿಕಾರಿಗಳು ಕೂಡಲೇ ಹಸಿರು ಕಾರಿಡಾರ್‌ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದರು. ಸದ್ಯ ಬಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 500ಮಂದಿಯನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶ್ಲಾಘಿಸಿದ್ದಾರೆ. ಬಾಲಕನಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!