spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಗ್ರರಿಗೆ ನೆರವು: ಮಂಗಳೂರಿನ ಜುಬೈರ್, ಆಯೇಶಾ ಬಾನೊ ಸಹಿತ ನಾಲ್ವರಿಗೆ 10 ವರ್ಷಗಳ ಕಠಿಣ ಶಿಕ್ಷೆ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಷೇಧಿತ ಭಯೋತ್ಪಾದಕ ಗುಂಪುಗಳಾದ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಜೊತೆ ಸಂಪರ್ಕಹೊಂದಿರುವ ಮಂಗಳೂರು ಮೂಲದ ದಂಪತಿ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಛತ್ತೀಸ್‌ಗಢದ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವನ್ನು ಒದಗಿಸುವ ವ್ಯವಸ್ಥೆ ಮಾಡುವ ಮೂಲಕ ಭಾರತದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯವೊಡ್ಡುವ ಸಂಚು ಇವರದಾಗಿತ್ತೆಂದು ನ್ಯಾಯಾಲಯ ಹೇಳಿದೆ.
ರಾಯಪುರ ಜಿಲ್ಲಾ ಅಡಿಷನಲ್ ಅಂಡ್ ಸೆಶನ್ ನ್ಯಾಯಾಶರಾದ ಅಜಯ್ ಸಿಂಗ್ ರಜಪೂತ್ ಅವರು ಈ ನಾಲ್ವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು, ಇವರನ್ನು ರಜ್ ಸಾವೊ(21), ಪಪ್ಪು ಮಂಡಲ್, ಜುಬೈರ್ ಹುಸೈನ್(42), ಆತನ ಪತ್ನಿ ಆಯೇಶಾ ಬಾನೊ(39) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಭಯೋತ್ಪಾದನಾ ಕಾನೂನಾಗಿರುವ ಕಾನೂನು ಬಾಹಿರ ಚಟುವಟಿಕೆಗಳು(ತಡೆ)ಕಾಯ್ದೆ(ಯುಎಪಿಎ)ಯಡಿ ಶಿಕ್ಷೆ ವಿಧಿಸಲಾಗಿದೆ. ಪ.ಬಂ.ದ ಸುಖೇನ್ ಹಲ್ದಾರ್(28)ಎಂಬಾತನನ್ನು ಖುಲಾಸೆಗೊಳಿಸಲಾಗಿದೆ.
ಪ್ರಕರಣದಲ್ಲಿ ಇರುವ ಸಾಕ್ಷ್ಯಾಧಾರಗಳನ್ವಯ ಅಪರಾಧಿಗಳು ಭಾರತದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಗಂಭೀರ ಹಾನಿಯುಂಟು ಮಾಡುವ ಉದ್ದೇಶ ಹೊಂದಿದ್ದುದು ಸ್ಪಷ್ಟವಾಗಿದೆ . ಆದ್ದರಿಂದ ಇವರ ಬಗ್ಗೆ ದಯಾಪರ ನಿಲುವು ತೋರುವುದು ಕಾನೂನು ಪ್ರಕಾರ ಸರಿಯಲ್ಲವಾದ್ದರಿಂದ ಅವರಿಗೆ ತಲಾ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಶರು ತೀರ್ಪಿನಲ್ಲಿ ಹೇಳಿದ್ದಾರೆ ಎಂಬುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಕೆ.ಶುಕ್ಲಾ ತಿಳಿಸಿದ್ದಾರೆ.
2013 ರ ಡಿಸೆಂಬರ್‌ನಲ್ಲಿ ರಾಯಪುರದ ಖಾಮ್ಟರಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಿಗೆ ನಗರದಲ್ಲಿ ರಸ್ತೆಬದಿಯ ಉಪಾಹಾರ ಅಂಗಡಿಯೊಂದನ್ನು ನಡೆಸುತ್ತಿದ್ದ ಬಿಹಾರದ ಜಮುಯಿಯ ನಿವಾಸಿಯೊಬ್ಬನನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ನಿರ್ದಿಷ್ಟ ಮಾಹಿತಿಗಳ ಮೇರೆಗೆ ಬಂಧಿಸಿತ್ತು. ಈತನಿಗೆ ಭಯೋತ್ಪಾದಕ ಜಾಲದ ಜೊತೆ ಸಂಪರ್ಕ ಇದ್ದುದಕ್ಕೆ ಸ್ಪಷ್ಟ ಮಾಹಿತಿಗಳು ಲಭಿಸಿದ್ದವು .
ಸಾವೊ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೆರವು ಜಾಲಕ್ಕೆ ನೆರವಾಗುವ ಕೊಂಡಿಯಾಗಿದ್ದನು. ಇಂಡಿಯನ್ ಮುಜಾಹಿದ್ದೀನ್ ಹಾಗೂ ಸಿಮಿ ಭಯೋತ್ಪಾದಕ ಗುಂಪುಗಳಿಗೆ ಸೇರಿದ ವ್ಯಕ್ತಿಗಳಿಗೆ ಹಣಕಾಸನ್ನು ಒದಗಿಸುವುದಕ್ಕಾಗಿ ಪಾಕಿಸ್ತಾನಿ ವ್ಯಕ್ತಿ ಖಾಲೀದ್ ಎಂಬಾತನಿಂದ ಹಣವನ್ನು ಪಡೆದು ಸಾವೊ ಭಯೋತ್ಪಾದಕ ಜಾಲಕ್ಕೆ ತಲುಪಿಸುತ್ತಿದ್ದನು. ರಾಯಪುರ ಮತ್ತು ಜಮುಯಿಯಲ್ಲಿನ ಬ್ಯಾಂಕ್ ಒಂದರಲ್ಲಿನ ಖಾತೆಯ ಮೂಲಕ ಭಯೋತ್ಪಾದಕ ಗುಂಪುಗಳಿಗೆ ಹಣಪೂರೈಕೆ ಜಾಲ ಕಾರ್ಯಾಚರಿಸುತ್ತಿತ್ತು ಎಂದು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ದಾಖಲೆಯೊಂದಿಗೆ ಆರೋಪಪಟ್ಟಿ ಸಲ್ಲಿಸಿದ್ದವು.
ಸಾವೊನ ಬಂಧನದ ಬಳಿಕ ಹಲ್ದಾರ್‌ನನ್ನು ಬಂಧಿಸಲಾಗಿತ್ತು. ಸಾವೊ ಈ ನಗದನ್ನು ತನ್ನ ಖಾತೆಯ ಮೂಲಕ ಮಂಗಳೂರಿನಲ್ಲಿದ್ದ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಜಾಲದ ಜುಬೈರ್ ಹುಸೈನ್ ಮತ್ತು ಆಯೇಶಾ ಬಾನೊ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದ ಬಿಹಾರ ಎಟಿಎಸ್ ತಂಡ ಮಂಗಳೂರಿಗೆ ಆಗಮಿಸಿ ಆಯೇಶಾ ಬಾನೊ ಮತ್ತು ಹುಸೈನ್‌ನನ್ನು ಬಂಧಿಸಿತ್ತು.
ಸಾವೊನನ್ನು ಬಂಧಿಸುವುದಕ್ಕೂ ಮುನ್ನ ಛತ್ತೀಸ್‌ಗಢ ಪೊಲೀಸರು 2013 ರ ನವೆಂಬರ್‌ನಲ್ಲಿ ಸಿಮಿ ಭಯೋತ್ಪಾದಕ ಗುಂಪಿನ ಜಾಲವೊಂದನ್ನು ಭೇದಿಸಿ ರಾಯಪುರವೊಂದರಿಂದಲೇ 16 ಮಂದಿಯನ್ನು ಬಂಧಿಸಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss