ಮದ್ಯಪಾನ ಮಾಡಿ ಶಾಲೆಗೆ ಬಂದ ಟೀಚರ್‌: ಸುದ್ದಿ ಕೇಳಿ ಶಾಕ್‌ ಆದ ಶಿಕ್ಷಣಾಧಿಕಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಶಿಕ್ಷಕರು ಮದ್ಯಪಾನ ಮಾಡಿ ಶಾಲೆಗೆ ಬರುತ್ತಾರೆ ಎಂಬುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ, ಶಿಕ್ಷಕಿಯೊಬ್ಬರು ಮದ್ಯಪಾನ ಮಾಡಿ ಶಾಲೆಗೆ ಬರೋದಂದ್ರೆ ಏನು..? ಹೌದು ಕುಡಿದು ಶಾಲೆಗೆ ಬಂದ ಶಿಕ್ಷಕಿ ತರಗತಿಯಲ್ಲೇ ನಿದ್ದೆಗೆ ಜಾರಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಜಶ್ಪುರ್ ಜಿಲ್ಲಾ ಶಿಕ್ಷಣಾಧಿಕಾರಿ ಸಿದ್ಧಿಕ್ ಎಂದಿನಂತೆ ತಪಾಸಣೆಯ ಭಾಗವಾಗಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಶಿಕ್ಷಕಿಯ ಸ್ಥಿತಿ ಕಂಡು ಗಾಬರಿಯಾಗಿದ್ದಾರೆ. 3 ಮತ್ತು 4 ನೇ ತರಗತಿಗೆ ಪಾಠ ಮಾಡುವ ಶಿಕ್ಷಕಿ ಜಗಪತಿ ಭಗತ್ ನೆಲದ ಮೇಲೆ ಮಲಗಿದ್ದಾರೆ. ಆರೋಗ್ಯ ಸರಿಯಿಲ್ಲದರಿಬೇಕು ಏಂದು ತಿಳಿದು ಮಕ್ಕಳನ್ನು ಕೇಳಿದಾಗ, ವಿದ್ಯಾರ್ಥಿಗಳು ಶಿಕ್ಷಕಿ ಅಸಲಿ ಕಹಾನಿಯನ್ನು ಶಿಕ್ಷಣಾಧಿಕಾರಿ ಮುಂದೆ ಬಿಚ್ಚಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಮದ್ಯ ಸೇವಿಸಿ ಶಾಲೆಗೆ ಬರುತ್ತಿರುವ ವಿಚಾರ ತಿಳಿದ ಅಧಿಕಾರಿ ಗಾಬರಿಯಾದರು.

ಕೂಡಲೇ ಶಿಕ್ಷಣಾಧಿಕಾರಿ ಸದಾನಿಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಲ್ಲಿಂದ ಬಂದ ಇಬ್ಬರು ಮಹಿಳಾ ಕಾನ್ ಸ್ಟೆಬಲ್ ಸಹಾಯದಿಂದ ಶಿಕ್ಷಕಿಯನ್ನು ಆಸ್ಪತ್ರೆಗೆ ಕರೆದೊಯ್ದು ರಕ್ತ ಪರೀಕ್ಷೆ ನಡೆಸಲಾಯಿತು. ಜಗಪತಿ ಭಗತ್ ಅವರ ರಕ್ತದ ಮಾದರಿಯಲ್ಲಿ  ಮದ್ಯ ಸೇವಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!