ಛತ್ತೀಸ್‌ಗಢ ಮದ್ಯ ಹಗರಣ: 121 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಛತ್ತೀಸ್‌ಗಢ ಮದ್ಯ ಹಗರಣಕ್ಕೆ (Chhattisgarh liquor scam) ಸಂಬಂಧಿಸಿ ಜಾರಿ ನಿರ್ದೇಶನಾಲಯವು(Enforcement Directorate) ‘ಕಿಂಗ್ ಪಿನ್’ ಐಎಎಸ್ ಅಧಿಕಾರಿ, ರಾಯಪುರ್ ಮೇಯರ್ ಸಹೋದರ ಸೇರಿದಂತೆ ಹಲವರಿಗೆ ಸೇರಿದ ಒಟ್ಟು 121 ಕೋಟಿ ರೂ.ಆಸ್ತಿಯನ್ನು ಜಪ್ತಿಯನ್ನು ಮಾಡಿದೆ.

ರಾಯಪುರ್ ಮೇಯರ್ ಸಹೋದರ ಅನ್ವರ್ ಧೇಬರ್, ಐಎಸ್‌ಐ ಅಧಿಕಾರಿ ಅನಿಲ್ ತುತೇಜಾ, ಛತ್ತೀಸ್‌ಗಢ ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅರುಣ್ ಪತಿ ತ್ರಿಪಾಠಿ ಹಾಗೂ ಇತರರ ಒಟ್ಟು 121 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ಹೇಳಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತುತೇಜಾ ಅವರ 8.83 ಕೋಟಿ ರೂ. ಮೌಲ್ಯದ 14 ಆಸ್ತಿ, 98.78 ಕೋಟಿ ರೂ. ಮೌಲ್ಯದ ಅನ್ವರ್ ಧೇಬರ್ ಅವರ 69 ಆಸ್ತಿಗಳು ಮತ್ತು 1.35 ಕೋಟಿ ರೂ. ಮೌಲ್ಯದ ತ್ರಿಪಾಠಿ ಅವರ ಒಂದು ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.

ರಾಯಪುರದಲ್ಲಿ ಧೇಬರ್ ಬಿಲ್ಡ್‌ಕಾನ್ ಕಂಪನಿಯ ಅಡಿಯಲ್ಲಿ ನಡೆಸಲಾಗುತ್ತಿದ್ದ ಹೋಟೆಲ್ ವೆನ್ನಿಂಗ್ಟನ್ ಕೋರ್ಟ್ ಕೂಡ ವಶಪಡಿಸಿಕೊಳ್ಳಲಾಗಿದೆ. ಇದು ರಾಯಪುರ ಮೇಯರ್ ಅವರ ಸಹೋದರ ಅನ್ವರ್ ಧೇಬರ್ ಅವರಿಗೆ ಸೇರಿದ್ದಾಗಿದೆ.

ವಿಕಾಶ್ ಅಗರ್ವಾಲ್ ಅಲಿಯಾಸ್ ಸುಬ್ಬು ಅವರ 1.54 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಅರವಿಂದ್ ಸಿಂಗ್ ಅವರ 11.35 ಕೋಟಿ ರೂ. ಮೌಲ್ಯದ 32 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಟುಟೇಜಾ ಮತ್ತು ಇತರ ವಿರುದ್ಧ ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣವು ದಿಲ್ಲಿ ಕೋರ್ಟ್‌ನಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!