Monday, August 8, 2022

Latest Posts

ಜನತಾ ಕಾಂಗ್ರೆಸ್ ಶಾಸಕ ದೇವವ್ರತ ಸಿಂಗ್ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜನಂದಗಾಂವ್​ನ ಖೈರಗಢ ವಿಧಾನಸಭಾ ಕ್ಷೇತ್ರದ ಜನತಾ ಕಾಂಗ್ರೆಸ್​ ಶಾಸಕ ದೇವವ್ರತ ಸಿಂಗ್ (52) ನಿನ್ನೆ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬುಧವಾರ ತಡರಾತ್ರಿ 3 ಗಂಟೆ ಸುಮಾರಿನಲ್ಲಿ ದೇವವ್ರತ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ದೇವವ್ರತ್ ಸಿಂಗ್ ಅವರು ಮೊದಲು 1995 ರಲ್ಲಿ ಕಾಂಗ್ರೆಸ್  ಶಾಸಕರಾಗಿ ಆಯ್ಕೆಯಾದರು. ನಂತರ 1998 ಮತ್ತು 2003 ರಲ್ಲಿ ಮತ್ತೆ ಮರು ಆಯ್ಕೆಯಾದರು. 2007 ರಲ್ಲಿ ಅವರು ರಾಜನಂದಗಾಂವ್ ಸಂಸದೀಯ ಸ್ಥಾನವನ್ನು ಗೆದ್ದರು. ನಂತರ 2017 ರಲ್ಲಿ ಕಾಂಗ್ರೆಸ್ ತೊರೆದರು.

2018ರಲ್ಲಿ ದೇವವ್ರತ ಸಿಂಗ್ ಮಾಜಿ ಸಿಎಂ ಅಜಿತ್ ಜೋಗಿ ನೇತೃತ್ವದ  ಜೆಸಿಸಿ ಪಕ್ಷ ಸೇರ್ಪಡೆಯಾಗಿ, ವಿಧಾನಸಭಾ ಚುನಾವಣೆಯಲ್ಲಿ ಖೈರಗಢ ಕ್ಷೇತ್ರದ ಜನತಾ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

“ದೇವವ್ರತ್ ಸಿಂಗ್ ಅವರ ಅಚಾನಕ್ ಸಾವಿನಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಾನು ಅವರೊಂದಿಗೆ 1998 ರಿಂದ ನಿಕಟ ಸಂಬಂಧ ಹೊಂದಿದ್ದೇನೆ. ಸಿಂಗ್ ಅವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ” ಎಂದು ಛತ್ತೀಸ್‌ಗಢ ಜನತಾ ಕಾಂಗ್ರೆಸ್ ಅಮಿತ್ ಜೋಗಿ ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss