ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆ ಚಿತ್ರದಲ್ಲಿ ನಟಿಸಿರುವ ಅಭಿಲಾಷಾ ಪಾಟೀಲ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ವಾರಣಾಸಿಯಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಮುಂಬೈಗೆ ವಾಪಸ್ ಆದ ಅಭಿಲಾಷಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಆರಂಭಿಕ ರೋಗ ಲಕ್ಷಣ ಕಾಣಿಸಿಕೊಂಡ ನಂತರ ಪರೀಕ್ಷೆ ಮಾಡಲಾಗಿತ್ತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
ಅಭಿಲಾಷಾ ಪಾಟೀಲ್ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಉಂಟಾಗಿದ್ದು, ನಂತರ ಅವರನ್ನು ಐಸಿಯುಗೆ ದಾಖಲಿಸಲಾಯಿತು. ನಂತರ ಅವರ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬದ್ರಿನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಸ್, ಮಲಾಲ್, ಚಿಚೋರೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿಲಾಷಾ ನಟಿಸಿದ್ದರು.