ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ: ಸಂಘದ ಪದಾಧಿಕಾರಿಗಳು, ಬೆಂಬಲಿಗರ ಪ್ರಾರ್ಥನೆ

ಹೊಸದಿಗಂತ ವರದಿ, ಬಳ್ಳಾರಿ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಬಿಎಸ್ ವೈ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಬೆಂಬಲಿಗರು, ಅಭಿಮಾನಿಗಳು ನಗರದ ಕೋಟೆ ಪ್ರದೇಶದ ಶ್ರೀ ಕೋಟೆ ಆಂಜನೇಯ ಸ್ವಾಮೀ ದೇಗುಲದಲ್ಲಿ ಶನಿವಾರ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದರು.

ಬಿಎಸ್ ವೈ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್ ಅವರು ಮಾತನಾಡಿ, ನಾಡಿನ ಹೆಮ್ಮೆಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೋನಾ ಇರುವುದು ವರದಿಯಲ್ಲಿ ದೃಢಪಟ್ಟಿದ್ದು, ಕೂಡಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಸಕಲ ಕಷ್ಟಗಳ ನಿವಾರಕ ಶ್ರೀ ಆಂಜಿನೇಯ ಸ್ವಾಮೀ ದೇಗುಲದಲ್ಲಿ ವಿಶೇಷ ‌ಪೂಜೆ, ಅರ್ಚನೆ ಸಲ್ಲಿಸಲಾಗಿದೆ.

ನಾಡಿನ ದೊರೆ ಮುಖ್ಯಮಂತ್ರಿಗಳು ಬೇಗನೇ ಗುಣಮುಖರಾಗಿ ಎಂದಿನಂತೆ ರಾಜ್ಯದ ಜನರ ಸೇವೆ ಮಾಡುವಲ್ಲಿ ‌ನಿರತರಾಗಲಿ ಎಂದು ದೇವರಲ್ಲಿ‌ ಪ್ರಾರ್ಥಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರಯ್ಯ, ಅನುಪ್‌ಕುಮಾರ್, ರಘು, ಸಚಿನ್, ಈಶ್ವರ್ ಗೌಡ, ಜಯಪ್ರಕಾಶ್, ಕಲ್ಪನಾ, ಲಲಿತಾ, ದೊಡ್ಡಬಸವೇಶ್ವರ್, ಭೂಮಿಕಾ, ಮಲ್ಲಿಕಾರ್ಜುನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss