Wednesday, August 10, 2022

Latest Posts

ಚಿಕ್ಕಬಳ್ಳಾಪುರ| ಎಟಿಎಂ ಒಡೆದು 15 ಲಕ್ಷ ದೋಚಿದ ಖದೀಮರು

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:

ಮಧ್ಯರಾತ್ರಿ ಎಟಿಎಂಗೆ ನುಗ್ಗಿದ ಇಬ್ಬರು ಕಳ್ಳರು ಎಟಿಎಂ ಯಂತ್ರ ಒಡೆದು ಸುಮಾರು 15 ಲಕ್ಷ ಹಣ ದೋಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಕ್ರಾಸ್‍ನಲ್ಲಿ ನಡೆದಿದೆ.
ಗ್ರಾಮದ ಎಸ್‍ಬಿಎಂ ಎಟಿಎಂ ಸೆಂಟರ್ ನಲ್ಲಿ ಘಟನೆ ನಡೆದಿದ್ದು, ಮುಸುಕುಧಾರಿಗಳಾಗಿ ಬಂದ ದರೋಡೆಕೋರರು ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ ಹಣ ದೋಚಿದ್ದಾರೆ.
ಬೆಳಿಗ್ಗೆ ಹಣ ಡ್ರಾ ಮಾಡಲು ಬಂದ ಗ್ರಾಹಕರು ಬ್ಯಾಂಕ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದು, ಬ್ಯಾಂಕ್ ಮ್ಯಾನೇಜರ್ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss