ಚಿಕ್ಕಬಳ್ಳಾಪುರ ನೂತನ ಶಾಸಕ ಪ್ರದೀಪ್ ಈಶ್ವರ್‌ ಸಾಕು ತಾಯಿ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನೂತನ ಶಾಸಕ ಪ್ರದೀಪ್ ಈಶ್ವರ್ ಅವರ ಸಾಕುತಾಯಿ ರತ್ನಮ್ಮ (72) ಇಂದು ವಿಧಿವಶರಾಗಿದ್ದಾರೆ.

ಕೆಲ ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ರತ್ನಮ್ಮ ಇಂದು ತಮ್ಮ ಗ್ರಾಮ ಪೆರೇಸಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಪ್ರಮಾಣವಚನ ಹಿನ್ನೆಲೆ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿದ್ದು, ವಿಷಯ ತಿಳಿದಂತೆ ಪೆರೇಸಂದ್ರಕ್ಕೆ ತೆರಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!