ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಗ್ರಾ.ಪಂ., 1126 ಗ್ರಾಮಗಳು, 39 ವಾರ್ಡ್ ಗಳು ಕೊರೋನಾ ಮುಕ್ತ: ಡಿಸಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:

ಜಿಲ್ಲೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳು, 1126 ಗ್ರಾಮಗಳು ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲಿನ 6 ಸ್ಥಳೀಯ ಸಂಸ್ಥೆಗಳ 39 ವಾರ್ಡ್ ಗಳು ಕೊರೋನಾ ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಡದಲಮರಿ ಗ್ರಾಮ ಪಂಚಾಯತಿಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದು,
ಈಗಾಗಲೇ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿಯಾಗಿದ್ದು, ಇದೀಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮುದಲೋಡು ಗ್ರಾಮಪಂಚಾಯ್ತಿಯು ಈ ಪಟ್ಟಿಗೆ ಸೇರ್ಪಡೆಯಾಗಿ ಕರೋನಾ ಮುಕ್ತ ಗ್ರಾಮಪಂಚಾಯ್ತಿಯಾಗಿದೆ ಹಾಗೂ ಚಿಕ್ಕಬಳ್ಳಾಪುರ-23, ಚಿಂತಾಮಣಿ -35, ಶಿಡ್ಲಘಟ್ಟ -28, ಬಾಗೇಪಲ್ಲಿ-25,ಗುಡಿಬಂಡೆ-8, ಗೌರಿಬಿದನೂರು-38 ಗ್ರಾಮಗಳು ಸೇರಿದಂತೆ ಒಟ್ಟಾರೆ ಈ ತಾಲೂಕುಗಳ 1126 ಗ್ರಾಮಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಅಲ್ಲದೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆ ಹಾಗೂ ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಟ್ಟು 39 ವಾರ್ಡ್ ಗಳು ಕೊರೊನಾ ಮುಕ್ತ ವಾರ್ಡ್ ಗಳಾಗಿವೆ ಎಂದರು.
ಶಿಡ್ಲಘಟ್ಟದಲ್ಲಿ 19 ವಾರ್ಡ್ ಕೊರೋನಾ ಮುಕ್ತ
ಜಿಲ್ಲೆಯ ಪೈಕಿ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ ಗಳಿದ್ದು, ಈ ಪೈಕಿ 1, 5, 6, 7, 8, 9, 10, 12, 13, 14, 16, 17, 18, 19, 21, 22, 24, 28, 29 ಒಳಗೊಂಡಂತೆ ಬರೋಬ್ಬರಿ 19 ವಾರ್ಡ್ ಗಳು ಕೊರೊನಾ ಮುಕ್ತ ವಾರ್ಡ್ ಗಳಾಗಿವೆ. ಅದೇ ರೀತಿ ಗೌರಿಬಿದನೂರು ನಗರಸಭೆ(4, 9, 10, 16, 27) ಮತ್ತು ಬಾಗೇಪಲ್ಲಿ ಪುರಸಭೆ(4, 10, 12, 17, 19 )ಯಲ್ಲಿ ತಲಾ 5 ವಾರ್ಡ್ ಗಳು ಕೊರೊನಾ ಮುಕ್ತವಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 4(3, 16, 19, 28) ವಾರ್ಡ್ ಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿದೆ. ಉಳಿದಂತೆ ಚಿಂತಾಮಣಿ ನಗರಸಭೆ(18, 26, 29) ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿ(4, 6, 10)ಯ ತಲಾ 3 ವಾರ್ಡ್ ಗಳು ಕೊರೊನಾ ಮುಕ್ತ ವಾರ್ಡ್ ಗಳಾಗಿವೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಲಾಕ್ ಡೌನ್ ಅಂತ್ಯದೊಳಗೆ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲಾ ಗ್ರಾಪಂಗಳು ಮತ್ತು ನಗರ ಪ್ರದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳ ವಾರ್ಡ್ಗಳನ್ನು ಕೊರೊನಾ ಮುಕ್ತ ಮಾಡಲು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss