Friday, August 19, 2022

Latest Posts

ಚಿಕ್ಕಮಗಳೂರು| ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಗೃತಿ ರಥದ ವಾಹನಕ್ಕೆ ಚಾಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಬಾಲ್ಯವಿವಾಹ, ಮೂಢನಂಬಿಕೆ, ಅನಕ್ಷರತೆ ಮತ್ತಿತರ ಕಾರಣದಿಂದ ಜನಸಂಖ್ಯೆ ಪ್ರಮಾಣ ನಿರಂತರವಾಗಿ ಏರುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಹೇಳಿದರು.
ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಗೃತಿ ರಥದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
2011 ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆಯು 121 ಕೋಟಿ ಆಗಿದ್ದು ಪ್ರತಿ ವರ್ಷವೂ 1.80 ಕೋಟಿ ಜನಸಂಖ್ಯೆ ಏರುತ್ತಿದೆ ಇದು ಹೀಗೆಯೆ ಮುಂದುವರಿದ್ದಲ್ಲಿ ಮುಂದಿನ 45 ವರ್ಷದಲ್ಲಿ 240 ಕೋಟಿ ದಾಟಲಿದೆ. ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇದ್ದು ಮುಂದಿನ 40 ವರ್ಷದಲ್ಲಿ 12 ಕೋಟಿ ದಾಟಲಿದೆ ಜನಸಂಖ್ಯೆ ಸ್ಪೋಟಕ್ಕೆ ಕಡಿವಾಣ ಹಾಕಬೇಕಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಜನಸಂಖ್ಯೆ ನಿಯಂತ್ರಣಕ್ಕಾಗಿ ಸರ್ಕಾರವು ಕಾನೂನು ನಿಯಮಗಳನ್ನು ರೂಪಿಸಿದ್ದು ಮದುವೆಯಾಗಲು ಗಂಡಿಗೆ 21 ಹಾಗೂ ಹೆಣ್ಣಿಗೆ 18 ವರ್ಷ ತುಂಬಿರಬೇಕು, ಮದುವೆಯಾದ ನಂತರ ಕನಿಷ್ಟ ಮೂರು ವರ್ಷದವರೆಗೂ ಮೊದಲ ಮಗು ಪಡೆಯಬಾರದು, ಪೋಷಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡಬೇಕು, ಕುಟುಂಬ ಕಲ್ಯಾಣದ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‍ಬಾಬು ಮಾತನಾಡಿ 1987 ಜುಲೈ 11 ರಂದು ಯುಗೋಸ್ಲೇವಿಯಾದಲ್ಲಿನ ಗಂಡುಮಗುವೊಂದು ವಿಶ್ವದ ಜನಸಂಖ್ಯೆಯು 500ನೇ ಕೋಟಿಯ ಪ್ರಜೆಯಾಗಿ ಹುಟ್ಟಿದನು ಆ ದಿನವನ್ನು ಯುನಿಸೆಫ್ ವಿಶ್ವಜನಸಂಖ್ಯೆ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ದೇಶದಲ್ಲಿ ಜನಸಂಖ್ಯೆ ದರವು 2001-2011 ರ ವೇಳೆಗೆ ಶೇ 17.64ಕ್ಕೆ ಇಳಿದಿದೆ, ಮರಣ ಪ್ರಮಾಣವು ಶೇ 7.1 ಕ್ಕೆ ಬಂದಿದೆ ಎಂದರು.
ಆರ್.ಸಿ.ಹೆಚ್. ಡಾ ಭರತ್, ಡಾ. ಹರೀಶ್‍ಬಾಬು, ಸಹಾಯಕ ಆಡಳಿತ ವಿಭಾಗಾಧಿಕಾರಿ ಪ್ರಶಾಂತ್, ಹರ್ಷ, ಸಿಎಂಡಿ, ಎನ್‍ಹೆಚ್‍ಎಂ, ಆರ್‍ಸಿಹೆಚ್ ವಿಭಾಗದ ಸಿಬ್ಬಂದಿಗಳು ಮತ್ತಿತರರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಸ್ವಾಗತಿಸಿ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!