Wednesday, August 10, 2022

Latest Posts

ಹಣಕ್ಕಾಗಿ ಬಾಲಕನ್ನು ಅಪಹರಿಸಿ ಕೊಲೆ: ಅಣ್ಣ-ತಮ್ಮ ಅರೆಸ್ಟ್

ಹೊಸದಿಗಂತ ವರದಿ, ಹಾವೇರಿ:

ಹಣಕ್ಕಾಗಿ ಅಣ್ಣ-ತಮ್ಮರಿಬ್ಬರು ಸೇರಿ ೧೧ ವರ್ಷದ ಬಾಲಕ ತೇಜಸ್‌ಗೌಡ ಜಗದೀಶ ಮಲ್ಲಿಕೇರಿಯನ್ನು ಅಪಹರಿಸಿ ಕೊಲೆಮಾಡಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ದೇವರಾಜು ತಿಳಿಸಿದರು.
ಶುಕ್ರವಾರ ನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗೊಷ್ಠಿಯಲ್ಲಿ ಬಾಲಕನ ಅಪಹರಣ ಹಾಗೂ ಕೊಲೆಮಾಡಿರುವ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಅಶ್ವಿನಿನಗರ ೧ ನೇ ಕ್ರಾಸ್ ನಿವಾಸಿ ಜಗದೀಶ ಗುಡ್ಡಪ್ಪ ಮಲ್ಲಿಕೇರಿ ಅವರು ತಮ್ಮ ೧೧ ವರ್ಷದ ಮಗ ತೇಜಸ್‌ಗೌಡ ಮಲ್ಲಿಕೇರಿ ಮಾರ್ಚ್ ೭ ರಂದು ಕಾಣಿಯಾಗಿದ್ದಾನೆ ಇಲ್ಲವೆ ಯಾರೋ ಅವನನ್ನು ಅಪಹರಿಸಿರಬಹುದೆಂದು ಇದೇ ಮಾರ್ಚ್ ೮ ರಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಗರ ಠಾಣೆ ಪಿಐ ಪ್ರಹ್ಲಾದ್ ಚನ್ನಗಿರಿ ಇವರ ನೇತೃತ್ವದಲ್ಲಿ ತನಿಖಾ ತಂಡವನ್ನು ಮಾ.೮ ರಂದು ರಚಿಸಲಾಗಿತ್ತು. ತನಿಖಾ ತಂಡವು ಬಾಲಕನ ಪತ್ತೆಗಾಗಿ ಶೋಧ ಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ ನಗರದ ವಿಶ್ವತೀರ್ಥ ಬಡಾವಣೆಯ ೨೦ ವರ್ಷ ರಿತೀಶ್ ಮೇಟಿ ಹಾಗೂ ೧೭ ವರ್ಷದ ಬಾಲಕ ಇವರುಗಳ ಮೇಲೆ ಸಂಶಯಾಸ್ಪದ ರೀತಿಯಲ್ಲಿ ಮಾಹಿತಿ ಬಂದ ಹಿನ್ನಲೆಯಲ್ಲಿ ಹಾಗೂ ಆರೋಪಿನ ಪಾಲಕರು ಸಹ ತಮ್ಮ ಮಕ್ಕಳ ಬಗ್ಗೆ ಬಾಲಕನ ಅಪಹರಣದ ಹಿಂದೆ ಸಂಶಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆರೋಪಿತರನ್ನು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಅಪಹರಣ ಹಾಗೂ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿತರು ಟಿವಿಯಲ್ಲಿ ಬರುತ್ತಿದ್ದ ಸಿಐಡಿ, ಶಾಂತಂ ಪಾಪಂ ಅನ್ನುವ ಕೈಂ ಸೀರಿಯಲ್‌ಗಳನ್ನು ನೋಡಿ ಅದರಿಂದ ಪ್ರೇರಣೆಗೊಂಡು ಪರಿಚಿತ ತೇಜಸ್‌ಗೌಡ ಮಲ್ಲಿಕೇರಿ ಬಾಲಕನನ್ನು ತಾವೇ ಹಣಕ್ಕಾಗಿ ಅಪಹರಿಸಿ ಕೊಂಡು ಹೋಗಿ ತಮ್ಮ ಕಾರಿನಲ್ಲಿ ಹಗ್ಗದಿಂದ ಆತನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಶವವನ್ನು ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಮಾ.೧೦ ರಂದು ಶವವನ್ನು ಮರಳಿ ಗೋಣಿಚೀಲದಲ್ಲಿ ತೆಂದು ತಮ್ಮ ಮನೆಯ ಹಿತ್ತಲಿನಲ್ಲಿ ಇಟ್ಟಿದ್ದಾರೆ. ಶವ ವಾಸನೆ ಬರುತ್ತಿದ್ದುದರಿಂದ ಅದನ್ನು ತಮ್ಮ ಮನೆಯ ಹತ್ತಿರವೇ ಇದ್ದ ದೇವರಾಜ ಅರಸು ಹಾಸ್ಟೆಲ್ ಪಕ್ಕದಲ್ಲಿದ್ದ ಗಿಡಗಂಟಿಗಳು ಬೆಳೆದ ಜಾಗೆಯಲ್ಲಿ ಸುಟ್ಟು ಹಾಕಿರುತ್ತಾರೆ. ಕೃತ್ಯಕ್ಕೆ ಬಳಸಿದ ಕಾರು, ಹಗ್ಗ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ಎಸ್.ಪಿ ವಿಜಯಕುಮಾರ ಸಂತೋಷ, ಹಾವೇರಿ ನಗರ ಠಾಣೆಯ ಪಿಐ ಪ್ರಹ್ಲಾದ್ ಚನ್ನಗಿರಿ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss