ಹಾಲಿನ ಪ್ಯಾಕೆಟ್‌ ತರಲು ಅಂಗಡಿಗೆ ಹೋಗಿದ್ದ ಬಾಲಕಿ ಸಿಕ್ಕಿದ್ದು ಶವವಾಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿಎಚ್‌ಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿ ಮೌನಿಕಾ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಸಿಕಂದರಾಬಾದ್ ವ್ಯಾಪ್ತಿಯ ಕಲಾಸಿಗುಡದಲ್ಲಿ ನಡೆದಿದೆ. ಮೌನಿಕಾ ಸ್ಥಳೀಯ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಮುಂಜಾನೆ ಹಾಲಿನ ಪ್ಯಾಕೆಟ್‌ಗಾಗಿ ಹೊರಗೆ ಹೋದ ಮೌನಿಕಾ ನಾಪತ್ತೆಯಾಗಿದ್ದಾಳೆ. ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಇದನ್ನು ಗಮನಿಸದೆ ಬಾಲಕಿ ಗುಂಡಿಗೆ ಬಿದ್ದಿದ್ದಾಳೆ.

ಮೌನಿಕಾ ನಾಪತ್ತೆಯಾಗುತ್ತಿದ್ದಂತೆ ಹುಡುಕಾಟ ಆರಂಭಿಸಿದರು. ಆದರೆ, ಡಿಆರ್‌ಎಫ್ ಸಿಬ್ಬಂದಿ ಮೌನಿಕಾ ಮೃತದೇಹವನ್ನು ಪಾರ್ಕ್‌ಲೈನ್‌ನಲ್ಲಿ ಪತ್ತೆ ಮಾಡಿದ್ದಾರೆ. ಹಾಲಿನ ಪ್ಯಾಕೆಟ್‌ಗಾಗಿ ಹೋದ ಮಗು ಅನಾಥವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಮಗುವಿನ ಶವವನ್ನು ಗಾಂಧಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಮಗುವಿನ ಸಾವಿಗೆ ಕಾರಣ ಜಿಎಚ್‌ಎಂಸಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮ್ಯಾನ್ ಹೋಲ್ ತೆರೆದಿರುವುದರಿಂದ ಈ ದುಷ್ಕೃತ್ಯ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮ್ಯಾನ್ ಹೋಲ್‌ಗೆ ಬಿದ್ದು ಮಗು ಸಾವನ್ನಪ್ಪಿದ ವಿಷಯ ತಿಳಿದ ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಅವರು ಘಟನೆಯ ವಿವರವನ್ನು ಅಧಿಕಾರಿಗಳು ಮತ್ತು ಸ್ಥಳೀಯರಿಗೆ ಕೇಳಿ ಪಡೆದರು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೇಯರ್ ಮಾತನಾಡಿ.. ನಡೆದ ಘಟನೆ ತುಂಬಾ ನೋವು ತಂದಿದೆ. ಮುಂಜಾನೆ 5 ಗಂಟೆಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೋರು ಮಳೆಯಿಂದಾಗಿ ಕಿರಿಯ ಸಹೋದರನೊಂದಿಗೆ ಹೋಗುತ್ತಿದ್ದ ಮಗು, ನೀರಿಗೆ ಬೀಳುತ್ತಿದ್ದ ತನ್ನ ಕಿರಿಯ ಸಹೋದರನನ್ನು ರಕ್ಷಿಸಲು ಪ್ರಯತ್ನಿಸುವಾಗ ಮ್ಯಾನ್ ಹೋಲ್‌ಗೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮೇಯರ್ ಹೇಳಿದರು. ಜಿಎಚ್‌ಎಂಸಿಯವರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು, ಆದರೆ ಅಂಗಡಿ ಮಾಲೀಕರು ಅವುಗಳನ್ನು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!