Thursday, August 11, 2022

Latest Posts

ಮಲಗಿರುವ ಮಕ್ಕಳ ಸುರಕ್ಷತೆ ಪರಿಶೀಲಿಸುವ ಶ್ವಾನ: ಮನಸ್ಸಿಗೆ ಮುದ ನೀಡುವ ದೃಶ್ಯ ವೈರಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಶ್ವಾನಗಳಿಗೆ ಮುಷ್ಠಿ ಅನ್ನ ಹಾಕಿದರೆ ಸಾಕು, ತಮ್ಮ ನಿಯತ್ತನ್ನು ಎಂದಿಗೂ ಮರೆಯುವುದಿಲ್ಲ. ಅನ್ನ ಹಾಕಿದ ಮಾಲಿಕನಿಗಾಗಿ ಜೀವ ಕೊಡಲು ಸಿದ್ಧವಿರುತ್ತವೆ. ಅಂತಹ ನಿರ್ಮಲ ಮನಸ್ಸಿನ ಶ್ವಾನಗಳ ವಿಡಿಯೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ಅಂತದ್ದೇ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.

ಹೌದು… ರಾತ್ರಿ ಮಲಗಿರುವ ಮಕ್ಕಳ ಸುರಕ್ಷತೆಯನ್ನು ಶ್ವಾನವೊಂದು ಖಾತ್ರಿಪಡಿಸಿಕೊಳ್ಳುವ ಅದ್ಭುತ ದೃಶ್ಯ ಇದು. ಇದೀಗ ಈ ವಿಡಯೋ ಎಲ್ಲೆಡೆ ವೈರಲ್ ಆಗುತ್ತಿದೆ.

 ವಿಡಿಯೋದಲ್ಲಿ ಏನಿದೆ?

ಬೆಚ್ಚಗೆ ಹೊದ್ದು ಮಲಗಿರುವ ಮಕ್ಕಳ ದೃಶ್ಯದ ಮೂಲಕ ವಿಡಿಯೋ ಕ್ಲಿಪ್ ಶುರುವಾಗುತ್ತದೆ. ಮಕ್ಕಳು ಮಲಗಿದ್ದಲ್ಲಿಗೆ ಶ್ವಾನವೊಂದು ಬಂದು ಮಕ್ಕಳ ಸುರಕ್ಷತೆ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತದೆ. ತನ್ನದೇ ವಿಧಾನದಲ್ಲಿ ಮೂಸಿ-ಮೂಸಿ ಮಕ್ಕಳು ಸುರಕ್ಷಿತವಾಗಿ ಮಲಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತದೆ.

ಈ ದೃಶ್ಯ @buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಆಗಿದ್ದು, 29 ಸೆಕೆಂಡಿನ ಈ ವಿಡಿಯೋ ನೋಡಿ ನೆಟ್ಟಿಗರು ಪಿಧಾ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss