ತೈವಾನ್ ಮೇಲೆ ದಂಡೆತ್ತಿ ಹೋಗ್ತಾರಾ ಶಿ ಜಿನ್ಪಿಂಗ್? ಆಡಿಯೊ ಕ್ಲಿಪ್ ಸೃಷ್ಟಿಸಿದೆ ಸಂಚಲನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೈವಾನ್‌ ಮೇಲೆ ಚೀನಾ ಆಕ್ರಮಣದ ಕುರಿತು ಹರಿದಾಡುತ್ತಿರುವ ಆಡಿಯೋ ಕ್ಲಿಪ್‌ ಇದೀಗ ಕೋಲಾಹಲ ಸೃಷ್ಟಿ ಮಾಡಿದೆ. ಚೀನಾ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಜೆನ್ನಿಫರ್ ಹೆಂಗ್ ಟ್ವೀಟ್ ಮಾಡಿರುವ ವೈರಲ್ ಆಡಿಯೋ ಕ್ಲಿಪ್ ಬೀಜಿಂಗ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಯೂಟ್ಯೂಬ್ ಚಾನೆಲ್ LUDE ಮಾಧ್ಯಮ ಪೋಸ್ಟ್ ಮಾಡಿದ 57 ನಿಮಿಷಗಳ ಸೋರಿಕೆಯಾದ ಕ್ಲಿಪ್ ಚೀನಾ ಇತಿಹಾಸದಲ್ಲಿ ಸ್ಪೋಟಕ ಸುದ್ದಿಯಾಗಿದೆ.

ಉನ್ನತ ರಹಸ್ಯ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಡ್ರೋನ್‌, ಯುದ್ಧನೌಕೆ ಸೈನಿಕ ದಳ, ಶಸ್ತ್ರಾಸ್ತ್ರ  ಇತ್ಯಾದಿಗಳನ್ನು ತಯಾರಿಸಲು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಂಪನಿಗಳನ್ನು ಪಟ್ಟಿ ಮಾಡಿದ್ದಾರೆ. ನಾವು ಪ್ರಸ್ತುತ 16 ಕಡಿಮೆ-ಕಕ್ಷೆಯ ಉಪಗ್ರಹಗಳನ್ನು ಹೊಂದಿದ್ದೇವೆ, 0.5 ರಿಂದ 10 ಮೀಟರ್ ಗ್ಲೋಬಲ್ ರಿಮೋಟ್ ಅಲ್ಟ್ರಾ-ಹೈ ಆಪ್ಟಿಕಲ್ ರೆಸಲ್ಯೂಶನ್ ಸೆನ್ಸಿಂಗ್ ಮತ್ತು ಇಮೇಜಿಂಗ್ ಸಾಮರ್ಥ್ಯವನ್ನು ಹೊಂದಿರುವುದಾಗಿ ಕ್ಲಿಪ್‌ನಲ್ಲಿ ರೆಕಾರ್ಡ್‌ ಆಗಿದೆ.

ಸಭೆಯಲ್ಲಿ ರಾಷ್ಟ್ರೀಯ ರಕ್ಷಣಾ ಆಯೋಗದ ಹೇಳಿಕೆಯನ್ನು ಉಲ್ಲೇಖಿಸಿ, ಮುಖ್ಯವಾಗಿ 64 10,000-ಟನ್ ರೋಲ್-ಆನ್/ರೋಲ್-ಆಫ್ ಹಡಗುಗಳು, 38 ವಿಮಾನಗಳು ಸೇರಿದಂತೆ ಏಳು ರೀತಿಯ ರಾಷ್ಟ್ರೀಯ ಮಟ್ಟದ ಯುದ್ಧ ಸಂಪನ್ಮೂಲಗಳ ಅವಶ್ಯಕತೆಯಿರುವುದಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ನೇಮಕಾತಿ ಕಛೇರಿಗೆ ಹೊಸ ಸೇನಾ ಸೇವಾ ಸಿಬ್ಬಂದಿ, ನಿವೃತ್ತ ಸೇನಾ ಸಿಬ್ಬಂದಿ ಮತ್ತು ವಿಶೇಷ ಪ್ರತಿಭೆಗಳು ಸೇರಿದಂತೆ ಒಟ್ಟು 15,500 ಸೈನಿಕರನ್ನು ನೇಮಕಾತಿಯ ಹೊಣೆ ನೀಡಿದೆ.

ಈ ವಿಡಿಯೊ ಕ್ಲಿಪ್ ಗೆ ಅಧಿಕೃತತೆ ಏನೂ ಇಲ್ಲ. ಆದರೆ, ಇದು ಚೀನಾದ ಮಿಲಿಟರಿ ಅಧಿಕಾರಿಗಳು ಮಾತನಾಡುತ್ತಿರುವ ಆಡಿಯೊ ಕ್ಲಿಪ್ ಹಾಗೂ ತೈವಾನ್ ಮೇಲೆ ದಾಳಿ ಮಾಡುವುದಕ್ಕೇ ಇಷ್ಟೆಲ್ಲ ತಯಾರಿ ಎಂಬುದು ಕ್ಲಿಪ್ ಲೀಕ್ ಮಾಡಿದವರ ಅಂಬೋಣ. ಹೀಗೆ ಕ್ಲಿಪ್ ಸುದ್ದಿ ಮಾಡುತ್ತಿರುವ ಹೊತ್ತಿನಲ್ಲೇ ಅಮೆರಿಕ ಅಧ್ಯಕ್ಷ ಜೊ ಬಿಡೆನ್, “ತೈವಾನ್‌ ತಂಟೆಗೆ ಬಂದರೆ ನಮ್ಮ ಮಿಲಿಟರಿ ಶಕ್ತಿಯಿಂದ ನಾವು ಅವರನ್ನು ರಕ್ಷಿಸುತ್ತೇವೆ. ನಾವು ಒನ್ ಚೀನಾ ನೀತಿಯನ್ನು ಒಪ್ಪಿಕೊಂಡಿದ್ದು, ನಾವು ಅದಕ್ಕೆ ಸಹಿ ಹಾಕಿದ್ದೇವೆ. ಆದರೆ ಅದನ್ನು ಬಲವಂತವಾಗಿ ತೆಗೆದುಕೊಳ್ಳಬಹುದೆಂಬ ಕಲ್ಪನೆಯು ಸೂಕ್ತವಲ್ಲ” ಎಂದು ಹೇಳಿರುವುದು ಗಮನಾರ್ಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!