ಪೂರ್ವ ಲಡಾಖ್​ ಸಮೀಪ ಮೊಬೈಲ್​ ಟವರ್​ ನಿರ್ಮಿಸಿ ಮತ್ತೆ ಉದ್ಧಟತನ ಮೆರೆದ ಚೀನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಚೀನಾವು ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್‌ನಲ್ಲಿ LAC ಗೆ ಸಮೀಪದಲ್ಲಿ ಮೂರು ಮೊಬೈಲ್ ಟವರ್‌ಗಳನ್ನು ನಿರ್ಮಿಸಿದ್ದು, ಇದನ್ನು ಚಿತ್ರ ಸಮೇತವಾಗಿ ಲಡಾಖ್​ನ ಚುಶುಲ್​​ನ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಬಹಿರಂಗಪಡಿಸಿದ್ದಾರೆ.
ಪ್ಯಾಂಗಾಂಗ್ ಸರೋವರದ ಮೇಲಿನ ಸೇತುವೆಯನ್ನು ಪೂರ್ಣಗೊಳಿಸಿದ ನಂತರ, ಚೀನಾವು ಭಾರತದ ಭೂಪ್ರದೇಶಕ್ಕೆ ಸಮೀಪವಿರುವ ಚೀನಾದ ಬಿಸಿನೀರಿನ ಬುಗ್ಗೆ ಬಳಿ 3 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಸ್ಟಾಂಜಿನ್ , ಇದು ಆತಂಕಕಾರಿಯಲ್ಲವೇ?. ನಮ್ಮಲ್ಲಿ ಜನವಸತಿ ಗ್ರಾಮಗಳಲ್ಲೇ 4ಜಿ ಸೌಲಭ್ಯವಿಲ್ಲ. ನನ್ನ ಕ್ಷೇತ್ರದ ವ್ಯಾಪ್ತಿಯ 11 ಹಳ್ಳಿಗಳಲ್ಲೂ 4ಜಿ ಸೌಲಭ್ಯವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜನವರಿಯಲ್ಲಿ ಭಾರತ ಪ್ಯಾಂಗಾಂಗ್ ಸರೋವರದ ಮೇಲೆ ಚೀನಾ ಅಕ್ರಮವಾಗಿ ಸೇತುವೆ ಕಟ್ಟುವುದಕ್ಕೆ ಬಲವಾಗಿ ವಿರೋಧಿಸಿತ್ತು. 60 ವರ್ಷಗಳ ಹಿಂದೆ ಅಕ್ರಮವಾಗಿ ವಶಪಡಿಸಿಕೊಂಡ ಭೂಪ್ರದೇಶದಲ್ಲಿ ಸೇತುವೆ ಕಟ್ಟುವುದನ್ನು ಭಾರತ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದನ್ನು ಚೀನಾತಿಳಿದಿರುವಂತೆ ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.
ಇದೀಗ ಚೀನಾ ಭಾರತ ಮತ್ತು ಚೀನಾ ಸೇನೆಗಳು ನಿರಂತರವಾಗಿ ನಿಯೋಜನೆಗೊಂಡಿದ್ದು, ಉದ್ವಿಗ್ನ ಪರಿಸ್ಥಿತಿ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!