ಚೀನಾ ಕೋವಿಡ್‌ ಉಲ್ಬಣ – ಮಾತ್ರೆಗಳಿಗಾಗಿ ಬ್ಲಾಕ್‌ ಮಾರ್ಕೆಟ್‌ಗೆ ಹೋಗುತ್ತಿದ್ದಾರೆ ಜನ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದಲ್ಲಿ ಕೋವಿಡ್‌ ಪರಿಸ್ಥಿತಿ ಏಕಾಏಕಿ ಉಲ್ಬಣಿಸುತ್ತಿದ್ದು ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆಯೆಂದು ವರದಿಗಳಾಗುತ್ತಿವೆ. ಇದು ಚೀನಾದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿದ್ದು ಔಷಧಗಳ ಅಲಭ್ಯತೆಯಿಂದ ಜನರು ಮಾತ್ರೆ ಖರೀದಿಲು ಬ್ಲಾಕ್‌ ಮಾರ್ಕೆಟ್‌ ನತ್ತ ಮುಖ ಮಾಡಿದ್ದಾರೆ.

ಚೀನಾವು ಕೆಲದಿನಗಳ ಹಿಂದಷ್ಟೇ ತನ್ನ ಶೂನ್ಯ ಕೋವಿಡ್‌ ನೀತಿಗಳನ್ನು ಹಿಂಪಡೆದಿತ್ತು. ಇದರಿಂದ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಚೀನಾವು ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸುವ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದ್ದರೂ ಕೂಡ ದೇಶದ ಕೋವಿಡ್‌ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಜನರಿಗೆ ಅಗತ್ಯ ಪ್ರತಿಜೀವಕಗಳನ್ನು, ಔಷಧಿಗಳನ್ನು ಪೂರೈಸಲು ಚೀನಾದ ಬಳಿ ಸಾಧ್ಯವಾಗುತ್ತಿಲ್ಲ. ಔಷಧಗಳ ಕೊರತೆಯಿಂದಾಗಿ ಜನರು ಪರದಾಡುತ್ತಿದ್ದು ಕಪ್ಪುಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.

ಜನರು ಬೇರೆಡೆ ತಯಾರಿಸಿದ ಮತ್ತು ಚೀನಾದಲ್ಲಿ ಮಾರಾಟಕ್ಕೆ ಅನುಮೋದಿಸದ ಔಷಧಿಗಳ ಜೆನೆರಿಕ್ ಆವೃತ್ತಿಗಳನ್ನು ಪಡೆಯಲು ಆನ್‌ಲೈನ್ ಮಾರಾಟದ ತಾಣಗಳನ್ನು ಹುಡುಕುತ್ತಿದ್ದಾರೆ. ಜನಪ್ರಿಯ ಟ್ವಿಟರ್ ತರಹದ ಪ್ಲಾಟ್‌ಫಾರ್ಮ್‌ನಲ್ಲಿರುವ ಒಬ್ಬ ಬಳಕೆದಾರರು ಭಾನುವಾರ ಅವರು ಬಾಂಗ್ಲಾದೇಶದಲ್ಲಿ ತಯಾರಿಸಿದ ಜೆನೆರಿಕ್ ಪ್ಯಾಕ್ಸ್‌ಲೋವಿಡ್ ಅನ್ನು ಖರೀದಿಸುತ್ತಿರುವುದಾಗಿ ಹೇಳಿರುವುದನ್ನು ಮೂಲಗಳು ವರದಿ ಮಾಡಿವೆ. ಕಳ್ಳಸಾಗಣೆದಾರರು ಅನೇಕ ರೀತಿಯ ಔಷಧಿಗಳನ್ನು ಚೀನಾದ ಮಾರುಕಟ್ಟೆಗೆ ರವಾನಿಸಿದ್ದು, ಜನರು ಒಂದಕ್ಕಿಂತ ಎರಡು ಪಟ್ಟು ಅಧಿಕ ಬೆಲೆ ನೀಡಿ ಅದನ್ನು ಖರೀದಿಸುತ್ತಿದ್ದಾರೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!