Thursday, August 18, 2022

Latest Posts

ಚೀನಾಕ್ಕೆ ಮತ್ತೆ ಎದುರಾಯ್ತು ಕೋವಿಡ್ ಕಂಟಕ: ಶಾಲೆ, ವಿಮಾನ ಸಂಚಾರ ರದ್ದು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜಗತ್ತಿಗೇ ಕೊರೋನಾ ಸೋಂಕು ಹರಡಿ ಈಗಿನ್ನ ವಿಶ್ರಮಿಸಿದ್ದ ಚೀನಾಕ್ಕೀಗ ಮತ್ತೆ ಕೋವಿಡ್ ಕಂಟಕ ಎದುರಾಗಿದೆ.
ಮತ್ತೆ ಕೋವಿಡ್ ಪ್ರಕರಣಗಳು ಕಾಣಿಸಿದ್ದು, ಚೀನಾದಲ್ಲಿ ವಿಮಾನ ಹಾರಾಟ, ಶಾಲೆಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿಗರ ಗುಂಪಿನಲ್ಲಿದ್ದ ವೃದ್ಧ ದಂಪತಿಗೆ ಸೋಂಕು ಕಾಣಿಸಿದ್ದು, ಬೀಜಿಂಗ್‌ನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಮಾಡಲಾಗಿದೆ.
ಪ್ರವಾಸಿಗರನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬೇರೆ ದೇಶಗಳಿಗೆ ತೆರಳುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಜತೆಗೆ ಶಾಲೆಗಳನ್ನು ಬಂದ್ ಮಾಡಿದ್ದು, ಕೋವಿಡ್ ಹರಡದಂತೆ ತಡೆಗಟ್ಟಲಾಗಿದೆ.
ವೃದ್ಧ ದಂಪತಿ ಬಹಳಷ್ಟು ಸ್ಥಳಗಳಲ್ಲಿ ಪ್ರವಾಸ ಕೈಗೊಂಡಿದ್ದು, ಪ್ರಯಾಣಿಕರ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಕ್ಸಿಯಾನ್ ಮತ್ತು ಲಾನ್ಸೂದಲ್ಲಿ ಶೇ.60 ರಷ್ಟು ವಿಮಾನಗಳ ಹಾರಾಟವನ್ನು ರದ್ದುಮಾಡಲಾಗಿದ್ದು, ಎರೆನ್ ಹೋಟ್ ನಗರದ ಒಳಗೆ ಮತ್ತು ಹೊರಗೆ ಜನರ ಪ್ರಯಾಣ ನಿಬಂಧಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!