Video ಸುದ್ದಿಕತೆ: ನಮ್ಮ ದೇಹವನ್ನೇ ರಣರಂಗವಾಗಿಸಹೊರಟಿದೆಯೇ ಚೀನಾ?

0
185

ಹೊಸದಿಗಂತ ಆನ್ಲೈನ್ ಡೆಸ್ಕ್:

ಕೋರೋನಾ ವೈರಸ್ ನೈಸರ್ಗಿಕವಲ್ಲ, ಅದು ಚೀನಾದ ಪ್ರಯೋಗಾಲಯದಿಂದಲೇ ಹೊರಬಿದ್ದಿತ್ತು ಎಂಬುದಕ್ಕೆ ಇತ್ತೀಚೆಗೆ ಹಲವು ಆಧಾರಗಳು ಸಿಕ್ಕಿವೆ. ಆದರಿದು ಹಳೆ ಕತೆ. ಹೊಸದೇನು ಗೊತ್ತಾ?

ಜಗತ್ತಿನಾದ್ಯಂತ ಸುಮಾರು 52 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಬೀಜಿಂಗ್ ಜಿನೊಮಿಕ್ಸ್ ಇನ್ಸ್ಟಿಟ್ಯೂಟ್ ಸುಮಾರು 1 ಕೋಟಿ ಮಂದಿಯ ಅನುವಂಶೀಯ ಜೈವಿಕ ಮಾದರಿಗಳನ್ನು ಸಂಗ್ರಹಿಸಿದೆ. ಇವೆಲ್ಲದರ ಮಾಹಿತಿಯನ್ನು ಅದು ಕಾರ್ಯನಿರ್ವಹಿಸುವ ಯಾವ ದೇಶದಲ್ಲೂ ಇಡದೇ ಕೇವಲ ಚೀನಾದ ಬೀಜಿಂಗ್ ನಲ್ಲಿಡಲಾಗಿದೆ. ಗರ್ಭಿಣಿಯರು ಪರೀಕ್ಷೆ ಮಾಡಿಕೊಳ್ಳುವ ಹಂತದಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬಿಜಿಐಗೆ ಪ್ರವೇಶ ನೀಡಲಾಗಿತ್ತು. ಅಲ್ಲದೇ ಇದೇ ಕಂಪನಿ ಕೋವಿಡ್ ಬೆನ್ನಲ್ಲಿ ಹಲವು ದೇಶಗಳಲ್ಲಿ ಪ್ರಯೋಗಾಲಯಗಳನ್ನು ಹಾಗೂ ಟೆಸ್ಟ್ ಪರಿಕರಗಳನ್ನು ನಿಯೋಜಿಸಿದೆ. ಈ ಎಲ್ಲ ಮೂಲಗಳಿಂದ ಸೂಕ್ಷ್ಮ ಅನುವಂಶಿಕ ಮಾಹಿತಿಗಳು ಸಂಗ್ರಹವಾಗಿವೆ.

ಇನ್ನೊಂದೆಡೆ ಚೀನಾ ಜಗತ್ತಿನ ಅತಿದೊಡ್ಡ ಜೀನ್ ಬ್ಯಾಂಕ್ ಸ್ಥಾಪಿಸಿದೆ.

ಒಟ್ಟಿನಲ್ಲಿ, ಇವತ್ತು ಯಾವುದೋ ದೇಶದ ಯಾವುದೋ ನಿರ್ದಿಷ್ಟ ಸಮುದಾಯದ ಜೈವಿಕ ಮಾಹಿತಿಗಳನ್ನು ಅರಿತುಕೊಂಡು ಅವರನ್ನಷ್ಟೇ ತಾಗಬಲ್ಲ ವೈರಸ್ಸೊಂದನ್ನು ನಿರ್ಮಿಸಬೇಕು ಎನ್ನುವುದಾದರೆ ಚೀನಾ ಬಹುಶಃ ಅದಕ್ಕೆ ಶಕ್ತವಾಗಿದೆ!

LEAVE A REPLY

Please enter your comment!
Please enter your name here