ಗಡಿಯಲ್ಲಿ ಚೀನಾ ಯದ್ಧಕ್ಕೆ ಸಿದ್ಧವಾಗುತ್ತಿದೆ, ಗಮನಿಸಿ: ಕೇಂದ್ರ ಸರಕಾರಕ್ಕೆ ರಾಹುಲ್‌ ಗಾಂಧಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಡಿಯಲ್ಲಿ ಚೀನಾ ಯದ್ಧಕ್ಕೆ ಸಿದ್ಧವಾಗುತ್ತಿದೆ. ಆದರೆ,ಕೇಂದ್ರ ಸರ್ಕಾರವು ಮಲಗಿದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಗಡಿಯಲ್ಲಿ ನಮ್ಮ ಯೋಧರಿಗೆ ಚೀನಾ ಸೈನಿಕರು ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಬಾಯ್ಮಾತಿನ ಪ್ರತಾಪ ತೋರಿಸುವ ಬದಲು ಗಡಿಯಲ್ಲಿ ಏನಾಗುತ್ತಿದೆ ಎಂಬ ವಾಸ್ತವವನ್ನು ಅರಿಯಬೇಕು. ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದ್ದಾರೆ.

ನಾನು ಎರಡೂವರೆ ವರ್ಷದಿಂದ ಹೇಳುತ್ತಿದ್ದೇನೆ. ಈಗಾಗಲೇ ಭಾರತದ 2 ಸಾವಿರ ಚದರ ಕಿ.ಮೀ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ. ಸರ್ಕಾರವು ಘಟನೆಗಳ ಆಧಾರಿತವಾಗಿ ಮಾತನಾಡುತ್ತದೆ. ಆದರೆ, ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಚೀನಾದ ಯುದ್ಧ ಸಿದ್ಧತೆಯನ್ನು ಗಂಭೀರವಾಗಿಯೇ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಡಿಸೆಂಬರ್‌ 9ರಂದು ಸಂಘರ್ಷ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!