ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪಾಶ್ಚಾತ್ಯ ರಾಷ್ಟ್ರಗಳು ಹಾಂಕಾಂಗ್ ಹಾಗೂ ಶಿಂಜಿಯಾಂಗ್ ಪ್ರಾಂತ್ಯಗಳಲ್ಲಿ ಚೀನಾದ ಮಾನವ ಹಕ್ಕುಗಳನ್ನು ಪ್ರಶ್ನಿಸಿ ನಿರ್ಬಂಧಗಳನ್ನು ಹೇರಿದ್ದಕ್ಕೆ ಪ್ರತಿಯಾಗಿ ಚೀನಾ ನೆಲದಲ್ಲಿ ಕಾರ್ಯನಿರ್ವಹಿಸುವ ಯುರೋಪ್ ಮತ್ತು ಅಮೆರಿಕನ್ ಕಂಪನಿಗಳನ್ನು ದಂಡಿಸುವ ಕ್ರಮಕ್ಕೆ ಚೀನಾ ಮುಂದಾಗಿದೆ.
ಚೀನಾ ಈ ನಿಟ್ಟಿನಲ್ಲಿ ಕಾನೂನೊಂದನ್ನು ಅನುಮೋದಿಸಿದ್ದು, ಅದರ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಆದರೆ ಮಾಧ್ಯಮ ವರದಿಗಳ ಪ್ರಕಾರ ಈ ಕಾನೂನು ಚೀನಾದಲ್ಲಿರುವ ಅಮೆರಿಕನ್ ಮತ್ತು ಯುರೋಪಿನ ಕಂಪನಿಗಳು ಚೀನಿ ಪ್ರಜೆಗಳ ವಿರುದ್ಧ “ತಾರತಮ್ಯ” ನಿಯಮಗಳನ್ನು ಅನುಸರಿಸಿದ್ದೇ ಆದರೆ, ಚೀನಾದಿಂದ ಅವರನ್ನು ಹೊರಗಟ್ಟಿ ಅವರ ಸಂಪತ್ತನ್ನೆಲ್ಲ ಸರ್ಕಾರ ಜಪ್ತಿ ಮಾಡಿಕೊಳ್ಳಬಹುದಾಗಿದೆ.
ಅಂದರೆ, ಅಮೆರಿಕ ಮತ್ತು ಯುರೋಪಿನ ದೇಶಗಳು ಹಾಂಕಾಂಗ್ ಅಥವಾ ಶಿಂಜಿಯಾಂಗ್ ವಿಚಾರದಲ್ಲಿ ಏನೇ ನಿರ್ಬಂಧ ಹೇರಿದರೂ ಅದನ್ನು ಉದ್ಯಮ ವಲಯದಲ್ಲಿರುವ ಹಾಗೂ ಚೀನಾದಲ್ಲಿ ತಮ್ಮ ಘಟಕ ಹೊಂದಿರುವ ಕಂಪನಿಗಳೇನಾದರೂ ಪಾಲಿಸುವುದಕ್ಕೆ ಹೋದರೆ ಅದಕ್ಕೆ ಪ್ರತಿಕೂಲ ಪರಿಣಾಮಗಳನ್ನೆದುರಿಸಲು ಸಿದ್ಧವಾಗಬೇಕು.