ಏಮ್ಸ್‌ ನ ಸೈಬರ್ ದಾಳಿಯ ಮೂಲ ಚೀನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (AIIMS) ಕಂಪ್ಯೂಟರ್ ಸಿಸ್ಟಮ್ ಮೇಲೆ ಇತ್ತೀಚೆಗೆ ನಡೆದ ಸೈಬರ್ ದಾಳಿಯ ಮೂಲ ಚೀನಾವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದೆ.

ಕಿಡಿಗೇಡಿಗಳು 100 ಸರ್ವರ್‌ಗಳಲ್ಲಿ (40 ಭೌತಿಕ ಹಾಗೂ 60 ವರ್ಚುವಲ್) 5 ಭೌತಿಕ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಯತ್ನಿಸಿದ್ದು, ಆದರೆ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವುದರಿಂದ ಹಾನಿಯನ್ನು ತಪ್ಪಿಸಲಾಗಿದೆ. ಇದರಿಂದ ಲಕ್ಷಗಟ್ಟಲೆ ರೋಗಿಗಳ ವಿವರಗಳು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.

ಹ್ಯಾಕರ್‌ಗಳ ದಾಳಿಯಿಂದಾಗಿ ನ. 23 ರಂದು ಮೊದಲ ಬಾರಿ ಏಮ್ಸ್ ಆಸ್ಪತ್ರೆಯ ಸರ್ವರ್ 9 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಈ ವೇಳೆ ಹ್ಯಾಕರ್‌ಗಳು ಏಮ್ಸ್ನಿಂದ ಸುಮಾರು 200 ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ದಾಳಿ ವೇಳೆ ಸುಮಾರು 3-4 ಕೋಟಿ ರೋಗಿಗಳ ವಿವರ ಸೋರಿಕೆಯಾಗಿರುವ ಸಂಶಯವಿದೆ.

ಬಳಿಕ ಡಿಸೆಂಬರ್ 2 ರಂದು ಆಸ್ಪತ್ರೆಯ 5 ಮುಖ್ಯ ಸರ್ವರ್‌ಗಳು ಸೈಬರ್ ದಾಳಿಗೆ ಒಳಗಾಗಿತ್ತು. ಈ ವೇಳೆಯೂ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗಳಿಗೆ ಹಾನಿಯಾಗಿತ್ತು.
ಇದೀಗ ಎಲ್ಲದರಹಿಂದೆ ಚೀನಾದ ಹ್ಯಾಕರ್‌ಗಳು ಇರುವುದು ಶಂಕೆಯಿದೆ ಎಂದು ಮೂಲಗಳು ತಿಳಿಸಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!