Thursday, August 18, 2022

Latest Posts

ಮಾಲ್ಡೀವ್ಸ್‌ನ ಸಮುದ್ರಕ್ಕೆ ಬಿದ್ದ ಚೀನಾದ ರಾಕೆಟ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಿಯಂತ್ರಣ ಕಳೆದುಕೊಂಡಿದ್ದ ಚೀನಾ ರಾಕೆಟ್ ಭಗ್ನಾವಶೇಷ ಇಂದು ಬೆಳಗ್ಗೆ ಮಾಲ್ಡೀವ್ಸ್‌ನ ಸಮುದ್ರಕ್ಕೆ ಬಂದು ಬಿದ್ದಿದೆ.
22 ಟನ್ ಭಾರ ಮತ್ತು 100 ಅಡಿ ಎತ್ತರ ಇರುವ ಚೀನಾದ ಲಾಂಗ್ ಮಾರ್ಚ್-5 ಬಿ ರಾಕೆಟ್ ಭಗ್ನಾವಶೇಷ ವಾರಾಂತ್ಯದಲ್ಲಿ ಭೂಮಿಗೆ ಬಂದು ಬೀಳಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು.
ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ನಂತರ, ಲಾಂಗ್ ಮಾರ್ಚ್-5 ಬಿ ರಾಕೆಟ್‍ನ ಕೊನೆಯ ಹಂತದ ಭಗ್ನಾವಶೇಷವು ವಾತಾವರಣವನ್ನು ಪುನಃ ಪ್ರವೇಶಿಸಿ ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರಕ್ಕೆ ಬಿದ್ದಿದೆ ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಚೀನಾದ ಮಹತ್ವಕಾಂಕ್ಷೆಯ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆಯ ಭಾಗವಾಗಿ ಏಪ್ರಿಲ್ 29ರಂದು 5ಬಿ ರಾಕೆಟ್ ಅನ್ನು ಕಕ್ಷೆಗೆ ಉಡಾಯಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!