Wednesday, July 6, 2022

Latest Posts

ಚೀನಾದಲ್ಲಿ ಮಂಕಿ ಬಿ ವೈರಸ್‌ಗೆ ವೈದ್ಯ ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಚೀನಾದಲ್ಲಿ ಮಂಕಿ ಬಿ ವೈರಸ್ ಪತ್ತೆಯಾಗಿದ್ದು, ವೈರಸ್ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವೈದ್ಯ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೋನಾ ತವರಾದ ಚೀನಾದಲ್ಲಿ ಇದೀಗ ಮಂಕಿ ಬಿ ವೈರಸ್ ಕೂಡ ಕಾಣಿಸಿದ್ದು, ಆತಂಕ ಹೆಚ್ಚಾಗಿದೆ.
ಮಾರ್ಚ್ ಆರಂಭದಲ್ಲಿ ಎರಡು ಕೋತಿಗಳು ಮೃತಪಟ್ಟಿದ್ದು, ಅವುಗಳ ಬಗ್ಗೆ ಬೀಜಿಂಗ್ ಮೂಲದ ವೈದ್ಯರೊಬ್ಬರು ಅಧ್ಯಯನ ನಡೆಸುತ್ತಿದ್ದರು.

ವೈದ್ಯರ ಸಂಪರ್ಕದಲ್ಲಿದ್ದ ಕೆಲವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಯಾರಿಗೂ ರೋಗ ಲಕ್ಷಣ ಕಾಣಿಸಿಲ್ಲ. ಕೋತಿಯ ಕುಲದಿಂದ ಹರಡುವ ಈ ವೈರಸ್‌ಗೆ ಹರ್ಪಿಸ್ ಬಿ, ಮಂಕಿ ಬಿ ವೈರಸ್, ಹರ್ಪಿಸ್ ವೈರಸ್ ಎಂದೂ ಕರೆಯಲಾಗುತ್ತದೆ.

ಮಕಾಕ್, ಚಿಂಪಾಂಜಿ ಹಾಗೂ ಕ್ಯಾಪುಚಿನ್ ಜಾತಿಯ ಮಂಗಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಮನುಷ್ಯರಿಗೆ ಈ ಸೋಂಕು ಹರಡುವುದು ತುಂಬಾನೇ ವಿರಳ. 1932 ರಲ್ಲಿ ಮೊದಲ ಬಾರಿಗೆ ಮನುಷ್ಯನಿಗೆ ಸೋಂಕು ಕಾಣಿಸಿದ್ದು, ಈವರೆಗೆ ಒಟ್ಟಾರೆ 50  ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 21  ಮಂದಿ ಮೃತಪಟ್ಟಿದ್ದಾರೆ.

ಕೋತಿಗಳ ಲಾವಾರಸ, ಮಲ, ಮೂತ್ರ, ಮೆದುಳು ಅಥವಾ ಬೆನ್ನುಹುರಿ ಮೇಲೆ ಸೋಂಕು ಇರುವ ಸಾಧ್ಯತೆ ಇದೆ. ಸೋಂಕಿಗೆ ಒಳಗಾದವರಿಗೆ ಶೀತ, ಜ್ವರ, ಸ್ನಾಯು ನೋವು, ತಲೆನೋವು, ಸುಸ್ತು, ಗುಳ್ಳೆಗಳು, ಉಸಿರಾಟದ ತೊಂದರೆ, ಹೊಟ್ಟೆ ನೋವು, ವಾಂತಿ ಕಾಣಿಸುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss