ಚೀನಾದಲ್ಲಿ ಎರಡು ಡೈನೋಸಾರ್‌ ಮೊಟ್ಟೆಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾದಲ್ಲಿ ಅನ್ಹುಯಿ ಪ್ರಾಂತ್ಯದ ಕಿಯಾನ್ಶಾನ್ ಜಲಾನಯನ ಪ್ರದೇಶದಲ್ಲಿ ಎರಡು ಡೈನೋಸಾರ್‌ ಮೊಟ್ಟೆಗಳನ್ನು ಕಂಡುಹಿಡಿಯಲಾಗಿದೆ. ಜರ್ನಲ್ ಆಫ್ ಪ್ಯಾಲಿಯೋಜಿಯೋಗ್ರಫಿಯಲ್ಲಿ ಪ್ರಕಟವಾದ ಹೊಸ ಸಂಶೋಧನಾ ಪ್ರಬಂಧದಲ್ಲಿ ಚೀನಾದ ತಜ್ಞರು ಈ ಅದ್ಭುತ ಆವಿಷ್ಕಾರದ ಬಗ್ಗೆ ವಿವರಿಸಿದ್ದಾರೆ.
ಕ್ಯಾಲ್ಸೈಟ್ ಹರಳುಗಳ ಸಮೂಹದಿಂದ ಆವೃತಗೊಂಡಿರುವ ಗುಂಡುಕಲ್ಲಿನ ಗಾತ್ರದ ಡೈನೋಸಾರ್ ಮೊಟ್ಟೆಗಳು ಪತ್ತೆಯಾಗಿವೆ.
ಎರಡು ಮೊಟ್ಟೆಗಳು ಡೈನೋಸಾರ್‌ಗಳ ಯುಗದ ಅಂತಿಮ ಅವಧಿಯಾದ ಕ್ರಿಟೇಶಿಯಸ್ ಅವಧಿಗೆ ಸೇರಿದವು. . ಅವು ಹೊಸ ಜಾತಿಯ ಡೈನೋಸಾರ್‌ಗಳಿಂದ ಬಂದವು ಎಂದು ನಂಬಲಾಗಿದೆ. ಮೊಟ್ಟೆಗಳು ದೊಡ್ಡ ಗಾತ್ರದಲ್ಲಿದ್ದು, ಮೊಟ್ಟೆಯ ಚಿಪ್ಪಿನ ಘಟಕಗಳ ಬಿಗಿಯಾದ ಜೋಡಣೆ ಮತ್ತು ಅವುಗಳ ವಿಶಿಷ್ಟ ಗೋಳಾಕಾರದ ಆಕಾರವನ್ನು ಗಮನಿಸಿ ಅವುಗಳ ಪ್ರಾಚೀನತೆಯನ್ನು ಅಳೆಯಲಾಗಿದೆ ಎಂದು ಪ್ಯಾಲಿಯಂಟಾಲಜಿಸ್ಟ್‌ಗಳು ವಿವರಿಸಿದ್ದಾರೆ. ಚೀನಾದಲ್ಲಿ ಈ ವರಗೆ ಸರಿಸುಮಾರು 16 ಓಫ್ಯಾಮಿಲಿಗಳು ಮತ್ತು 35 ಓಜೆನೆರಾಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ.
ಇದಲ್ಲದೆ, ಹವಾಮಾನದ ಪರಿಣಾಮಗಳಿಂದಾಗಿ, ಮೊಟ್ಟೆಯ ಚಿಪ್ಪುಗಳ ಹೊರಭಾಗ ಮತ್ತು ಮೊಟ್ಟೆಯ ಚಿಪ್ಪಿನ ಘಟಕಗಳು ಹೊಸದಾಗಿ ಪತ್ತೆಯಾದ ಡೈನೋಸಾರ್ ಮೊಟ್ಟೆಗಳಲ್ಲಿ ಸಂರಕ್ಷಿಸಲ್ಪಟ್ಟಿಲ್ಲ ಎಂದು ತಜ್ಞರು ವಿವರಿಸಿದರು.
ಒಂದು ಮೊಟ್ಟೆಯು ಭಾಗಶಃ ಹಾನಿಗೊಳಗಾಗಿದೆ ಮತ್ತು ಆದ್ದರಿಂದ ಅದರ ಒಳಭಾಗದ ಕ್ಯಾಲ್ಸೈಟ್ ಹರಳುಗಳನ್ನು ಬಹಿರಂಗಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇವೆರಡೂ “ಸುಮಾರು ಗೋಲಾಕಾರದ”, 4.1 ಇಂಚುಗಳು ಮತ್ತು 5.3 ಇಂಚುಗಳ ನಡುವಿನ ಉದ್ದ ಮತ್ತು 3.8 ಇಂಚುಗಳು ಮತ್ತು 5.2 ಇಂಚುಗಳ ನಡುವಿನ ಅಗಲವನ್ನು ಹೊಂದಿದೆ.
ಸಂಶೋಧಕರ ಪ್ರಕಾರ, ಮೊಟ್ಟೆಗಳು ಶಿಕ್ಸಿಂಗೋಲಿಥಸ್ ಕಿಯಾನ್‌ಶಾನೆನ್ಸಿಸ್ ಎಂಬ ಹೊಸ ಪ್ರಬೇಧವನ್ನು  ಪ್ರತಿನಿಧಿಸುತ್ತವೆ. ಹೊಸದಾಗಿ ಪತ್ತೆಯಾದ ಮೊಟ್ಟೆಗಳು ಆರ್ನಿಥೋಪಾಡ್‌ಗಳಿಗೆ ಸೇರಿವೆ ಎಂದು ಇದು ಸೂಚಿಸುತ್ತದೆ. ಆರ್ನಿಥೋಪಾಡ್‌ ಗಳೆಂದರೆ ಸಣ್ಣ ಸಣ್ಣ ಸಸ್ಯಗಳನ್ನು ತಿನ್ನುವ ಬೈಪೆಡಲ್ ಡೈನೋಸಾರ್‌ಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!