ಮೌಂಟ್‌ ಎವರೆಸ್ಟ್‌ ಪರ್ವತಕ್ಕೂ ಲಗ್ಗೆ ಇಟ್ಟ ಚೀನಾ, ಹವಾಮಾನ ಕೇಂದ್ರ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾ ಸದಾ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದೇ ನಿಟ್ಟಿನಲ್ಲಿ ಇದೀಗ ಪ್ರಪಂಚದ ಅತ್ಯಂತ ಎತ್ತರದ ಸ್ಥಳದಲ್ಲಿ ಹವಾಮಾನ ಕೇಂದ್ರವನ್ನು ಸ್ಥಾಪಿಸಿ ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ.

ಮೌಂಟ್ ಎವರೆಸ್ಟ್ ಅನ್ನು ವಿಶ್ವದ ಅತಿ ಎತ್ತರದ ಶಿಖರ ಎಂದು ಕರೆಯಲಾಗುತ್ತದೆ. ಇದೇ ಶಿಖರದಲ್ಲಿ ಸಮುದ್ರ ಮಟ್ಟದಿಂದ 8,800 ಮೀಟರ್ ಎತ್ತರದಲ್ಲಿ ಚೀನಾ ಬುಧವಾರ (ಮೇ 4,2022) ಹವಾಮಾನ ಕೇಂದ್ರವನ್ನು ನಿರ್ಮಿಸಿದೆ. ಇದನ್ನು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಬಹಿರಂಗಪಡಿಸಿದ್ದು, ಹವಾಮಾನ ಕೇಂದ್ರವು ಉಪಗ್ರಹ ವ್ಯವಸ್ಥೆ ಹಾಗೂ ಮಾಹಿತಿ ಪ್ರಸರಣ ಕೇಂದ್ರವನ್ನು ಹೊಂದಿದೆ. ಉಪಗ್ರಹ ಸಂವಹನ ವ್ಯವಸ್ಥೆಯ ಮೂಲಕ ಕಾಲಕಾಲಕ್ಕೆ ಹವಾಮಾನದ ಮಾಹಿತಿಯನ್ನು ಒದಗಿಸುವ ನಿಲ್ದಾಣವು ಸೋಲಾರ್ ಪ್ಯಾನಲ್‌ಗಳಿಂದ ಸ್ವಯಂ ಚಾಲಿತವಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಮಾಹಿತಿಯನ್ನು ಒದಗಿಸುತ್ತದೆ. ರೇಡಿಯೋ ಸ್ಟೇಷನ್ ಪ್ರತಿ 12 ನಿಮಿಷಗಳಿಗೊಮ್ಮೆ ಪ್ರಸಾರ ಮಾಡಲು ಕೋಡ್ ಮಾಡಲಾಗಿದೆ. ಎರಡು ವರ್ಷಗಳವರೆಗೆ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ.

ಸಮುದ್ರ ಮಟ್ಟದಿಂದ 8,430 ಮೀಟರ್ ಎತ್ತರದಲ್ಲಿ ಮೌಂಟ್ ಎವರೆಸ್ಟ್‌ನ ದಕ್ಷಿಣಕ್ಕೆ ಹವಾಮಾನ ಕೇಂದ್ರವನ್ನು ಸ್ಥಾಪಿಸುವ ಮೂಲಕ ಬ್ರಿಟಿಷ್ ಮತ್ತು ಅಮೆರಿಕನ್ ವಿಜ್ಞಾನಿಗಳು ಈ ಹಿಂದೆ ವಿಶ್ವದಾಖಲೆ ಮಾಡಿದ್ದರು. ಚೀನಾದ ಈ ಹೊಸ ಕೇಂದ್ರ ಆ ದಾಖಲೆಯನ್ನು ಹಿಂದಿಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!