ಮತ್ತೆ ಚೀನಾದಿಂದ ಬರ್ತಿದೆ ಕೆಟ್ಟ ಸುದ್ದಿ, ಕೊರೋನಾ ಲಾಕ್ಡೌನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಚೀನಾದ ಹೈಟೆಕ್ ನಗರ ಎಂದೇ ಪರಿಗಣಿತವಾಗಿರುವ ಶೆಂಜನ್ ಈಗ ಸಂಪೂರ್ಣ ಲಾಕ್ಡೌನ್ ಆಗಿದೆ. ಕಾರಣ ಅಲ್ಲಿ ಅತಿಯಾಗಿ ವರದಿಯಾಗುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳು.

ದುರ್ಬಲ ಒಮಿಕ್ರಾನ್ ಅಲೆಯೊಂದಿಗೆ ಕೊರೋನಾ ಮಹಾಮಾರಿ ತನ್ನ ರಕ್ಕಸ ಅವತಾರವನ್ನು ಕೊನೆಗೊಳಿಸಿತು ಎಂದು ಜಗತ್ತು ಅಂದುಕೊಳ್ಳುತ್ತಿರುವಾಗಲೇ ಚೀನಾದಿಂದ ಬರುತ್ತಿರುವ ಈ ಸುದ್ದಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಒಂದು ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಹೊಸದಾಗಿ 66 ಪ್ರಕರಣಗಳು ಪತ್ತೆಯಾಗಿರುವುದಕ್ಕೆ ಏಕಿಷ್ಟು ಬಿಗಿ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಏಕೆಂದರೆ ಹಾಂಕಾಂಗ್ ನಗರಕ್ಕೆ ಹೋಲಿಸಿದರೆ ಈ ಸಂಖ್ಯೆ ಏನೇನೂ ಅಲ್ಲ. ಹಾಕಾಂಗ್ ನಲ್ಲಿ 32,000 ದಷ್ಟು ಪಾಸಿಟಿವ್ ಪ್ರಕರಣಗಳಿವೆ.

“ನಮ್ಮದು ಜೀರೋ ಕೋವಿಡ್ ಪಾಲಿಸಿ. ಇದನ್ನು ಈಗಲೇ ಇಷ್ಟು ತೀವ್ರವಾಗಿ ಹತ್ತಿಕ್ಕದಿದ್ದರೆ ಸಮುದಾಯ ಮಟ್ಟದಲ್ಲಿ ರೋಗ ತೀವ್ರವಾಗಿ ಹಬ್ಬುತ್ತದೆ” ಎಂದು ಸ್ಥಳೀಯಾಡಳಿತ ಹೇಳಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!