ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಾಕಿಸ್ತಾನಕ್ಕೆ ತಾಕಲಾಟ ತಂದಿರುವ ಚೀನಾ ಲಸಿಕೆ ಕುರಿತ ಸೌದಿ ನೀತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್: 

ವಿಶ್ವ ಆರೋಗ್ಯ ಸಂಸ್ಥೆಯೇನೋ ಚೀನಾದ ಲಸಿಕೆಗಳಿಗೆ ಮಾನ್ಯತೆ ನೀಡಿದ್ದಿರಬಹುದು. ಆದರೆ ಸೌದಿ ಅರೇಬಿಯಾ ಅದನ್ನು ಗುರುತಿಸಿಲ್ಲ. ಅಸ್ಟ್ರಾಜೆನೆಕಾ, ಫಿಜರ್, ಜಾನ್ಸನ್ ಆ್ಯಂಡ್ ಜಾನ್ಸನ್, ಮಾಡೆರ್ನಾಗಳಿಗೆ ಮಾತ್ರ ಮಾನ್ಯತೆ ನೀಡಿದೆ.
ಇದರಿಂದ ಬಹಳ ಸಂಕಷ್ಟಕ್ಕೆ ಒಳಗಾಗಿರುವುದು ಪಾಕಿಸ್ತಾನ. ಏಕೆಂದರೆ ಪಾಕಿಸ್ತಾನದ ಲಸಿಕೆ ಪ್ರಕ್ರಿಯೆ ಪೂರ್ತಿ ಆವರಿಸಿಕೊಂಡಿರುವುದು ಚೀನಾವೇ. ಅಂತಾರಾಷ್ಟ್ರೀಯ ಒಪ್ಪಂದಗಳ ಫಲವಾಗಿ ಅದು ಕೆಲವಷ್ಟು ಕೋವಿಶೀಲ್ಡ್ ಲಸಿಕೆ ಪಡೆಯಬಹುದಾದರೂ ಈಗ ಲಸಿಕೆ ಚುಚ್ಚಿಸಿಕೊಂಡವರೆಲ್ಲ ಚೀನಾ ಲಸಿಕೆಯನ್ನೇ ಪಡೆದವರು. ಹೀಗಾಗಿ ಯಾವುದೇ ಪಾಕಿಸ್ತಾನಿ ಸೌದಿಗೆ ತೆರಳುವುದಕ್ಕೆ ತಲೆನೋವು ಎದುರಾಗಿದೆ.
ಸುಮಾರು 20 ಲಕ್ಷ ಪಾಕಿಸ್ತಾನಿಯರು ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾರೆ ಎಂಬುದೊಂದು ಅಂದಾಜು.
ಇದೀಗ ಪಾಕಿಸ್ತಾನ ಹಲವು ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕ ಹಾಗೂ ಖುದ್ದು ಸೌದಿ ಜತೆ ಮಾತುಕತೆಯಲ್ಲಿ ಎಲ್ಲ ಬಗೆಯ ಲಸಿಕೆಗಳನ್ನು ಮಾನ್ಯ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದೆ.
ಮಧ್ಯಪ್ರಾಚ್ಯದ ರಾಷ್ಟ್ರಗಳು ಚೀನಾ ಲಸಿಕೆ ಬಗ್ಗೆ ಹಿಂಜರಿಕೆ ಹೊಂದುವುದಕ್ಕೂ ಸಕಾರಣಗಳಿವೆ. ಬಹರೇನ್ ಮತ್ತು ಯುಎಇಗಳಲ್ಲಿ ಸಿನೋಫಾರ್ಮ್ ಲಸಿಕೆ ತೆಗೆದುಕೊಂಡವರಲ್ಲಿ ಪ್ರತಿಕಾಯಗಳು ಉತ್ಪತ್ತಿ ಆಗದೇ ಈಗ ಮತ್ತೆ ಅವರಿಗೆ ಫಿಜರ್ ಡೋಸು ತೆಗೆದುಕೊಳ್ಳುವ ಅವಕಾಶವನ್ನು ಆ ಸರ್ಕಾರಗಳು ನೀಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss