Monday, August 8, 2022

Latest Posts

ಚೀನಾ ಲಸಿಕೆ ನಂಬಲೊಲ್ಲದ ಸಿಂಗಾಪುರ: ಸಿನೊವ್ಯಾಕ್ಸ್ ಹಾಕಿಸಿಕೊಂಡ ಪ್ರಜೆಗಳು ಲೆಕ್ಕದಿಂದ ಹೊರಕ್ಕೆ 

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚೀನಾ ಲಸಿಕೆಗೆ ಇನ್ನೊಂದು ಹಿನ್ನೆಡೆ ಉಂಟಾಗಿದೆ. ಸಿಂಗಾಪುರವು ಲಸಿಕೆ ಪಡೆದವರ ಲೆಕ್ಕಾಚಾರದ ಪಟ್ಟಿಯಿಂದ ಚೀನಾದ ಸಿನೊವ್ಯಾಕ್ ಲಸಿಕೆ ಪಡೆದ ತನ್ನ ಪ್ರಜೆಗಳನ್ನು ಹೊರಗಿಟ್ಟಿದೆ. ಆ ದೇಶದಲ್ಲಿ ಫೈಜರ್ ಮತ್ತು ಮಾಡೆರ್ನಾ ಲಸಿಕೆ ಪಡೆದವರನ್ನು ಮಾತ್ರವೇ ಲಸಿಕೆಯುಕ್ತರು ಎಂಬ ಲೆಕ್ಕಾಚಾರಕ್ಕೆ ಸೇರಿಸಿಕೊಳ್ಳಲಾಗಿದೆ.

ಸಿಂಗಾಪುರವು ಚೀನಾ ಲಸಿಕೆಗೆ ತುರ್ತು ಉಪಯೋಗದ ಮಾನ್ಯತೆ ನೀಡಿರಲಿಲ್ಲ. ಆದರೆ ಇದನ್ನು ಪ್ರಯೋಗಿಸುವುದಕ್ಕೆ ಇಷ್ಟಪಡುವ ಖಾಸಗಿ ಆಸ್ಪತ್ರೆಗಳಿಗೆ ಅಂಥದೊಂದು ಅವಕಾಶ ನೀಡಲಾಗಿತ್ತು. ಆ ದೇಶದಲ್ಲಿ ಸುಮಾರು 17,000 ಜನ ಸಿನೊವ್ಯಾಕ್ಸ್ ಪಡೆದಿದ್ದರು. ಚೀನಾದ ಲಸಿಕೆ ಫೈಜರ್ ಮತ್ತು ಮಾಡೆರ್ನಾಗಳಂತೆ ಪರಿಣಾಮಕಾರಿ ಆಗಿಲ್ಲ ಹಾಗೂ ಅದನ್ನು ತೆಗೆದುಕೊಂಡವರಲ್ಲಿ ಕೆಲವು ಅಡ್ಡಪರಿಣಾಮಗಳು ಉಂಟಾಗಿವೆ ಎಂಬುದೇ ಸಿಂಗಾಪುರದ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. 

ಈ ಮೊದಲು ಚೀನಾದ ಲಸಿಕೆಗಳನ್ನು ನೀಡಿದ್ದ ಯುಎಇ, ಬಹ್ರೇನ್ ಇತ್ಯಾದಿ ದೇಶಗಳು ಅವುಗಳ ಪರಿಣಾಮದ ಬಗ್ಗೆ ಅಸಮಾಧಾನಗೊಂಡು ಮತ್ತೆ ಬೇರೆ ಲಸಿಕೆಗಳತ್ತ ಹೊರಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಚೀನಾ ಲಸಿಕೆಯನ್ನೇ ಅಧಿಕವಾಗಿ ಹಾಕಿಸಿಕೊಂಡಿದ್ದ ಸಿಶೆಲ್ಸ್ ದ್ವೀಪರಾಷ್ಟ್ರದ ಜನ ಎರಡು ಡೋಸುಗಳ ನಂತರವೂ ಮತ್ತೊಂದು ಕೊರೋನಾ ಸಾಂಕ್ರಾಮಿಕದ ಅಲೆಯನ್ನು ಎದುರಿಸಿದ್ದು ಸಹ ವರದಿಯಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss