ಚೀನಾದ ಕೋವಿಡ್ ಸಾವಿನ ಸಂಖ್ಯೆ 2 ಮಿಲಿಯನ್ ಮೀರಬಹುದು ಎನ್ನುತ್ತಿದೆ ಹಾಂಗ್ ಕಾಂಗ್ ಅಧ್ಯಯನ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಚೀನಾ ಸರ್ಕಾರವು ಸಾಂಕ್ರಾಮಿಕ ನಿರ್ಬಂಧಗಳನ್ನು ತ್ವರಿತವಾಗಿ ತೆಗೆದುಹಾಕುತ್ತಿದೆ. ಇದರಿಂದಾಗಿ ಕೋವಿಡ್‌ ಮತ್ತೆ ಉಲ್ಬಣಗೊಂಡು 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಕೋವಿಡ್ -19 ನಿಂದ ಸಾಯಬಹುದು ಎಂಬ ಭೀಕರ ಅಂಶವನ್ನು ಹಾಂಗ್ ಕಾಂಗ್‌ನ ಸಂಶೋಧಕರ ಹೊಸ ಅಧ್ಯಯನವೊಂದು ತೆರೆದಿಟ್ಟಿದೆ.

ಇದೀಗ ನಿರ್ಬಂಧಗಲ್ಲಿ ಸಡಿಲಿಕೆ ತರಲಾಗುತ್ತಿದೆ. ಆದರೆ ವೈರಸ್‌ ಪ್ರಭಾವವನ್ನು ಕಡಿಮೆ ಗೊಳಿಸಲು ಅಗತ್ಯವಾದ ಸಾಮೂಹಿಕ ವ್ಯಾಕ್ಸಿನೇಷನ್ ಬೂಸ್ಟರ್ ಅಭಿಯಾನ ಮುಂತಾದ ವ್ಯವಸ್ಥೆಗಳ ಕೊರತೆ ಇದೆ. ಹಾಗಾಗಿ ಪ್ರತಿ ಮಿಲಿಯನ್‌ಗೆ ಸುಮಾರು 684 ಜನರು ಸಾಯುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. “ನಮ್ಮ ಫಲಿತಾಂಶಗಳ ಪ್ರಕಾರ ಡಿಸೆಂಬರ್ 2022-ಜನವರಿ 2023 ರಲ್ಲಿ ನಿರ್ಬಂಧಗಳ:ನ್ನು ಪುನಃ ತೆರೆಯುವ ಮೂಲಕ ಎಲ್ಲಾ ಪ್ರಾಂತ್ಯಗಳ ಸ್ಥಳೀಯ ಆರೋಗ್ಯ ವ್ಯವಸ್ಥೆಗಳುಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಸೂಚಿಸುತ್ತದೆ” ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಹೊಸ ವರದಿಯ ಪ್ರಕಾರ, ರಾಷ್ಟ್ರವ್ಯಾಪಿ ಸೋಂಕಿನ ಪ್ರಮಾಣಗಳ ಸ್ಫೋಟಕ ಬೆಳವಣಿಗೆಯು ಹೊಸ ರೂಪಾಂತರಕ್ಕೂ ಕಾರಣವಾಗಬಹುದು ಎನ್ನಲಾಗುತ್ತಿದೆ.

ಚೀನಾವು 1.14ಬಿಲಿಯನ್‌ ಜನಸಂಖ್ಯೆ ಹೊಂದಿರುವುದರಿಂದ ಕೋವಿಡ್‌ ನಿರ್ಬಂಧಗಳನ್ನು ತೆಗೆಯುವದರಿಂದ ಮತ್ತೊಮ್ಮೆ ಕೋವಿಡ್‌ ಉಲ್ಬಣಗೊಂಡು 2 ಬಿಲಿಯನ್‌ ಜನರು ಸಾವನ್ನಪ್ಪಬಹುದು ಎಂದು ವರದಿ ಉಲ್ಲೇಖಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!