Sunday, April 11, 2021

Latest Posts

ಮುಂಬೈ ವಿದ್ಯುತ್ ವೈಫಲ್ಯಕ್ಕೆ ಚೀನಾ ಸೈಬರ್‌ದಾಳಿ ಕಾರಣ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಕಳೆದ ವರ್ಷ ಮುಂಬಯಿಯಲ್ಲಿ ಕೆಲವು ಗಂಟೆಗಳ ವಿದ್ಯುತ್ ಸಮಸ್ಯೆ ಉಂಟಾಗಿ ನಗರದ ಜನತೆ ಹಲವು ಗಂಟೆಗಳ ಕಾಲ ನರಕ ಯಾತನೆ ಅನುಭವಿಸಿದ್ದು ನೆನಪಿರಬಹುದು. ಈ ರೀತಿ ವಿದ್ಯುತ್ ವೈಫಲ್ಯ ಉಂಟಾಗಲು ಚೀನಾದ ಸೈಬರ್ ದಾಳಿ ಕಾರಣವೆಂಬ ಅನುಮಾನವು ಈಗ ವ್ಯಕ್ತಗೊಂಡಿದೆ. ನೂತನ ಅಧ್ಯಯನವೊಂದು ಮುಂದಕ್ಕೂ ಚೀನಾದಿಂದ ಇಂತಹ ಸೈಬರ್ ದಾಳಿಗಳು ನಡೆಯುವ ಸಾಧ್ಯತೆಯನ್ನು ತೆರೆದಿಟ್ಟಿದೆ.
ಚೀನಾದ ರೆಡ್‌ಎಕೋ ಎಂಬ  ಸೈಬರ್ ದಾಳಿಕೋರರ ಸಂಘಟನೆಯೊಂದು ಭಾರತದಲ್ಲಿನ ಹಲವಾರು ಪ್ರಮುಖ ಸಂಸ್ಥೆಗಳ ಮತ್ತು ವ್ಯವಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಭಾರತದೊಂದಿಗಿನ ಗಡಿ ಸಂಘರ್ಷ ಉಲ್ಬಣಿಸಿದ ಬಳಿಕ ಭಾರತದ ಕೇಂದ್ರಗಳ ಮೇಲೆ ಚೀನಾದಿಂದ ಸೈಬರ್ ದಾಳಿ ಹೆಚ್ಚುತ್ತಲೇ ಇದೆ. ಸುಮಾರು ನಲ್ವತ್ತು ಸಾವಿರ ಸೈಬರ್ ದಾಳಿಗಳು ನಡೆದಿರುವದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚೀನಾವು ಸೈಬರ್ ದಾಳಿಯನ್ನು ಕೂಡ ತನ್ನ ಒಂದು ಯುದ್ಧ ತಂತ್ರವಾಗಿ ಬಳಸುತ್ತಿದೆ. ಭಾರತವಷ್ಟೇ ಅಲ್ಲದೆ ಅಮೆರಿಕ , ಆಸ್ಟ್ರೇಲಿಯಾಗಳ ವಿರುದ್ಧವೂ ಸೈಬರ್ ದಾಳಿ ನಡೆಸಿದ್ದು ಇತ್ತೀಚೆಗೆ ಪತ್ತೆಯಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss