ಒಂದೆಡೆ ಭೀಕರ ಪ್ರವಾಹಕ್ಕೆ 1 ಲಕ್ಷ ಮಂದಿ ಸ್ಥಳಾಂತರ, ಮತ್ತೊಂದೆಡೆ ಶಾಖದ ಅಲೆಗೆ ಜನರು ತತ್ತರ; ಇದು ಚೀನಾದ ಸ್ಥಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾದ ನೈಋತ್ಯ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಭೀಕರ ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದು 1 ಲಕ್ಷಕ್ಕೂ ಹೆಚ್ಚಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚೀನಾದಲ್ಲಿ ಹವಾಮಾನ ಬದಲಾವಣೆಯ ಪರಿಣಾಗಳು ನಿಚ್ಚಳವಾಗಿ ಗೋಚರಿಸುತ್ತಿದ್ದು, ಈಗ ಪ್ರವಾಹಕ್ಕೆ ತುತ್ತಾಗಿರುವ ಭಾಗವು ಕೆಲವೇ ದಿನಗಳ ಹಿಂದೆ ಬೇಸಿಗೆಯ ಬಹುಪಾಲು ಶಾಖದ ಅಲೆ ಮತ್ತು ಬರಗಾಲದಿಂದ ಕಂಗೆಟ್ಟಿತ್ತು.
ಸಿಚುವಾನ್ ಪ್ರಾಂತ್ಯ ಮತ್ತು ಚಾಂಗ್‌ಕಿಂಗ್ ನಗರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಚಾಂಗ್‌ಕಿಂಗ್, ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾದ ಮೆಗಾಸಿಟಿ ಮತ್ತು ಅದು ಸುತ್ತಮುತ್ತಲಿನ ಪರ್ವತಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಹ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಎರಡೂ ದಿನಗಳಲ್ಲಿ ಹಠಾತ್ ಪ್ರವಾಹದ ಸಂಭವಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ವಿಚಿತ್ರವೆಂದರೆ ಚೀನಾದ ದೇಶದ ದಕ್ಷಿಣ ಭಾಗದಲ್ಲಿ ಬರಗಾಲ ಹಾಗೂ ಉಷ್ಣ ವಾತಾವರಣದಿಂದ ಜನರು ಬಳಲುತ್ತಿದ್ದಾರೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ (104 ಫ್ಯಾರನ್‌ಹೀಟ್) ಅನ್ನು ತಲುಪಿದೆ, ಹವಾಮಾನಶಾಸ್ತ್ರಜ್ಞರು ಚೀನಾದಲ್ಲಿ 1961 ರಿಂದೀಚೆಗೆ ಕಾಣಿಸಿಕೊಂಡ  ಅತ್ಯಂತ ಪ್ರಬಲವಾದ ಶಾಖ ತರಂಗ ಎಂದು ಹೇಳುತ್ತಾರೆ. ಆ ಭಾಗದಲ್ಲಿ ಕಟ್ಟುನಿಟ್ಟಾದ ನೀರಿನ ಸಂರಕ್ಷಣೆ ಮತ್ತು ಜನರು ಮತ್ತು ಜಾನುವಾರುಗಳ ಅಗತ್ಯ ಪೂರೈಸಲು ತುರ್ತು ನೀರಿನ ಮೂಲಗಳನ್ನು ಬಳಸಲು ಶಿಫಾರಸು ಮಾಡಿದೆ.
ಪ್ರವಾಹದಿಂದಾಗಿ 1 ಲಕ್ಷದ 19 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸಿಚುವಾನ್ ತುರ್ತು ನಿರ್ವಹಣಾ ಆಡಳಿತ ತಿಳಿಸಿದೆ. ಸಿಚುವಾನ್‌ನಲ್ಲಿ ಬೇಸಿಗೆಯಲ್ಲಿ ಬರಗಾಲದಿಂದ ಹೆಚ್ಚು ಬಾಧಿತವಾಗಿರುವ ಎರಡು ನಗರಗಳಲ್ಲಿ ​​ಒಂದಾಗಿತ್ತು. ಬಿಸಿಗಾಳಿಯಿಂದ ಭೂಮಿಯ ತೇವಾಂಶವನ್ನೆಲ್ಲಾ ಹೀರಿ ಏಕಾಏಕಿ ಮಳೆಯಾದಾಗ ನೈಸರ್ಗಿಕ ವಿಕೋಪಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಚೀನಾದ ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!