ಶಾಖದಲೆಗಳ ಹೊಡೆತಕ್ಕೆ ಸಿಲುಕಿ ನಲುಗುತ್ತಿದೆ ಚೀನಾದ ಆರ್ಥಿಕತೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ನಿಂದ ನಿಧಾನವಾಗಿ ಹೊರಬರುತ್ತಿರುವ ಚೀನಾಗೆ ಶಾಖದಲೆಗಳು ಭಾರೀ ಹೊಡೆತ ಕೊಡುತ್ತಿವೆ. ಇದು ಚೀನಾದ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ಜನರು ಶಾಖದಲೆಗಳಿಗೆ ಹೆದರಿ ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿದ ಏರ್‌ ಕಂಡೀಷನರ್‌ ಗಳ ಬಳಕೆಯು ವಿದ್ಯುತ್‌ ಬೇಡಿಕೆಯನ್ನು ಹೆಚ್ಚಿಸಿದೆ.

ಮೂಲಗಳ ವರದಿಯ ಪ್ರಕಾರ ಹೀಟ್‌ ವೇವ್‌ನಿಂದ ಸಾಕಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಪರಿಸ್ಥಿತಿಯು ಮುಂದಿನ ಎರಡರಿಂದ ಮೂರು ತಿಂಗಳ ಕಾಲ ಮುಂದುವರಿಯಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಖದಲೆಗಳಿಗೆ ಸಿಲುಕಿ ಚೀನಾದ ಆರ್ಥಿಕತೆಯು ವಿನಾಶಕಾರಿ ಹಂತಕ್ಕೆ ತಲುಪುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಪರೀತ ತಾಪಮಾನವು ಬೆಳೆಗಳ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತಿದ್ದು ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ ಅಲ್ಲದೇ ಜಾನುವಾರರುಗಳಿಗೂ ಮೇವಿನ ಸಮಸ್ಯೆ ಎದರುರಾಗಿದೆ. ಯಾಂಗ್ಟ್ಜಿ ನದಿಯ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರದೇಶಗಳು ಜುಲೈನಿಂದ ಹೆಚ್ಚಿನ ತಾಪಮಾನವನ್ನು ಕಂಡಿವೆ. ಈ ಪ್ರದೇಶದಲ್ಲಿ ಮಳೆಯು ಸುಮಾರು 45% ದಷ್ಟು ಕಡಿಮೆಯಾಗಿದೆ. ಹೀಗಾಗಿ ವಿದ್ಯುತ್‌ ಉತ್ಪಾದನೆಗೂ ಅಡ್ಡಿಯುಂಟಾಗಿದೆ.

ಇದರಿಂದ ಶಕ್ತಿಕೊರತೆ ಉಂಟಾಗಿದ್ದು ಬೃಹತ್‌ ಕೈಗಾರಿಕೆಗಳೂ ಸಮಸ್ಯೆ ಎದುರಿಸುತ್ತಿವೆ. ಉಕ್ಕು, ರಾಸಾಯನಿಕಗಳು, ರಸಗೊಬ್ಬರ ಮುಂತಾದ ಉದ್ಯಮಗಳು ನಿಧಾನಗತಿಯಲ್ಲಿ ಉತ್ಪಾದನೆ ಮಾಡುತ್ತಿವೆ. ನಿರ್ಮಾಣ ಮತ್ತು ಕೃಷಿ ಕ್ಷೇತ್ರಗಳೂ ಕೂಡ ಹಿನ್ನಡೆ ಎದುರಿಸುತ್ತಿರುವುದು ಚೀನಾದ ಆರ್ಥಿಕತೆ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!