ಅಕ್ಟೋಬರ್ ನಲ್ಲಿ ಇನ್ನಷ್ಟು ಕುಸಿದ ಚೀನಾ ಆರ್ಥಿಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹೆಚ್ಚುತ್ತಿರುವ ಕೋವಿಡ್‌ ನಿರ್ಬಂಧಗಳಿಂದಾಗಿ ಚೀನಾದ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಉತ್ಪಾದನಾವಲಯವು ತೀವ್ರವಾದ ನಿಧಾನ ಗತಿ ಅನುಭವಿಸುತ್ತಿರುವುದು ಚೀನಾದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಎಂದೆನಿಸಿಕೊಂಡಿದ್ದ ಚೀನಾಗೆ ಆರ್ಥಿಕತೆಯೇ ದೊಡ್ಡ ತಲೆನೋವಾಗಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಚೀನಾದ ಕಾರ್ಖಾನೆಗಳ ಉತ್ಪಾದನೆ ನಿರೀಕ್ಷೆಗಿಂತ ಬಹಳ ನಿಧಾನಗತಿಯಲ್ಲಿ ಸಾಗಿದೆ. ಅಲ್ಲದೇ ಚಿಲ್ಲರೆ ಮಾರಾಟವು ಕಳೆದ ಐದು ತಿಂಗಳಿನಲ್ಲಿ ಮೊದಲಬಾರಿಗೆ ಕುಸಿದಿದೆ. ಇವೆಲ್ಲವೂ ದೀರ್ಘಕಾಲದ ಕೋವಿಡ್-19 ನಿರ್ಬಂಧಗಳು, ಜಾಗತಿಕ ಆರ್ಥಿಕ ಹಿಂಜರಿತದ ಅಪಾಯಗಳು ಮತ್ತು ಆಸ್ತಿ ಕುಸಿತಗಳಿಂದ ಪ್ರಭಾವಿತವಾಗಿವೆ ಎನ್ನಲಾಗುತ್ತಿದೆ.

ವರದಿಯೊಂದರ ಪ್ರಕಾರ 2020ರಿಂದಲೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿನ ಹೂಡಿಕೆಯು ಗಣನೀಯವಾಗಿ ಕುಸಿಯುತ್ತಿದೆ. ಅದೆಷ್ಟೋ ವಸತಿ ಸಂಕೀರ್ಣಗಳು ನಿರ್ಮಾಣಹಂತದಲ್ಲಿಯೇ ಸ್ಥಗಿತಗೊಂಡಿವೆ. ಈಗಾಗಲೇ ನಿರ್ಮಾಣಗೊಂಡಿರುವ ಸಂಕೀರ್ಣಗಳೂ ಬಿಕರಿಯಾಗದೇ ಖಾಲಿ ಉಳಿದಿವೆ. “”ಅಕ್ಟೋಬರ್ ಚಟುವಟಿಕೆಯ ಬೆಳವಣಿಗೆಯು ವಿಶಾಲವಾಗಿ ನಿಧಾನವಾಯಿತು ಮತ್ತು ಮಾರುಕಟ್ಟೆ ನಿರೀಕ್ಷೆಗಳನ್ನು ಕಳೆದುಕೊಂಡಿತು, ಹದಗೆಡುತ್ತಿರುವ ಕೋವಿಡ್ ಪರಿಸ್ಥಿತಿ, ದೀರ್ಘಕಾಲದ ಆಸ್ತಿ ಕುಸಿತ ಮತ್ತು ನಿಧಾನಗತಿಯ ರಫ್ತು ಬೆಳವಣಿಗೆಯು ನಾಲ್ಕನೇ ತ್ರೈಮಾಸಿಕದ ದುರ್ಬಲ ಆರಂಭವನ್ನು ಸೂಚಿಸುತ್ತದೆ” ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕೈಗಾರಿಕಾ ಉತ್ಪಾದನೆಯು ಅಕ್ಟೋಬರ್‌ನಲ್ಲಿ ಕಳೆದ ವರ್ಷಕ್ಕಿಂತ ಕೇವಲ 5 ಶೇಕಡಾದಷ್ಟು ಏರಿಕೆಯಾಗಿದೆ. ಹೀಗಾಗಿ ಚೀನಾದ ಕೈಗಾರಿಕಾ ಉತ್ಪಾದನೆಯ ಬೇಡಿಕೆಯೂ ಕುಸಿಯುತ್ತಿದೆ. ವ್ಯಾಪಕ ಲಾಕ್‌ಡೌನ್‌ ನಿಂದಾಗಿ ಚಿಲ್ಲರೆ ಮಾರಾಟವು ಮೇ ತಿಂಗಳ ನಂತರ ಮೊದಲ ಬಾರಿಗೆ ಕುಸಿದಿದ್ದು 0.5 ಶೇಕಡಾದಷ್ಟು ಇಳಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!