Sunday, April 18, 2021

Latest Posts

ಚೀನಾದ ದೈತ್ಯ ಮೊಬೈಲ್ ಸಂಸ್ಥೆಯಿಂದ ಎಲೆಕ್ಟ್ರಿಕ್ ಕಾರ್! ಉತ್ಪಾದನೆಗೆ ಎಷ್ಟು ಹೂಡಿಕೆ ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚೀನಾದ ದೈತ್ಯ ಮೊಬೈಲ್ ಉತ್ಪಾದಕಾ Xiaomi ಸಂಸ್ಥೆ ಮುಂದಿನ 10 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸುವ ನಿಟ್ಟಿನಲ್ಲಿ 10 ಬಿಲಿಯನ್ ಯುವಾನ್ ಡಾಲರ್(1000 ಕೋಟಿ ರೂ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಹೌದು, ಈಗಾಗಲೇ ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗಿದ್ದು, Xiaomi ಸಂಸ್ಥೆ ತನ್ನ ಸಂಪೂರ್ಣ ಸ್ವಾಮ್ಯದಡಿಯಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನ ಸಂಸ್ಥೆ ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕೆ ಆರಂಭಿಕ 1000 ಕೋಟಿ ರೂ. ಹೂಡಿಕೆ ಮಾಡಲಿದೆ.
Xiaomi ಮೊಬೈಲ್ ನ ಮುಖ್ಯ ಕಾರ್ಯನಿರ್ವಾಹಕ ಲೀ ಜುನ್ ಅವರು ಕೂಡ ಹೊಸ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಾರೆ.
ವಿಶ್ವದಲ್ಲಿ ಯಾವುದೇ ವ್ಯಕ್ತಿಯೋ ಒತ್ತಡದಿಂದಿರದೆ ಸ್ಮಾರ್ಟ್ ಜೀವನ ನಡೆಸಲು ಗುಣಮಟ್ಟದ ಎಲೆಕ್ಟ್ರಿಕ್ ವಾಹನ ನೀಡಲಿದ್ದೇವೆ ಎಂದು Xiaomi ತಿಳಿಸಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss