spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೀನಾದ ಮಾರುಕಟ್ಟೆ ಪ್ರವೇಶಿಸಿದೆ ಭಾರತದ ಕ್ಯಾನ್ಸರ್ ವಿರೋಧಿ ಔಷಧ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಫಾರ್ಮಸಿಯಲ್ಲಿ ಚೀನಾ ಪಾರುಪತ್ಯ ಗೊತ್ತಿರುವಂತದ್ದೇ. ಆದರೆ ಭಾರತವೀಗ ಚೀನಾ ಮಾರುಕಟ್ಟೆಯನ್ನು ತಾನೂ ಪ್ರವೇಶಿಸಿದೆ. ಇಂಥದ್ದೊಂದು ಉದಾಹರಣೆ ಇಲ್ಲಿದೆ.
ಚೀನಾದಲ್ಲಿ ಭಾರತೀಯ ಔಷಧೀಯ ಉದ್ಯಮ ನೆಲೆ ಕಂಡಿದ್ದು, ಭಾರತದಿಂದ ಮೊದಲ ಕ್ಯಾನ್ಸರ್ ವಿರೋಧಿ ಔಷಧ ಚೀನಾ ಮಾರುಕಟ್ಟೆ ಪ್ರವೇಶಿಸಿದೆ ಎಂದು ಚೀನಾದ ಭಾರತೀಯ ರಾಯಭಾರಿ ವಿಕ್ರಾಂತ್ ಮಿಸ್ರಿ ಹೇಳಿದ್ದಾರೆ.

ಭಾರತದಿಂದ ಮೊದಲ ಕ್ಯಾನ್ಸರ್ ವಿರೋಧಿ ಔಷಧ ಅಬಿರಟೆರೋನ್ ಚೀನಾ ಮಾರುಕಟ್ಟೆ ತಲುಪಿದ್ದು, ಈ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಹೈದರಾಬಾದ್ ಮೂಲದ ಡಾ.ರೆಡ್ಡಿ ಲ್ಯಾಬೋರೇಟರೀಸ್‌ನಲ್ಲಿ ತಯಾರಾದ ಕ್ಯಾನ್ಸರ್ ವಿರೋಧಿ ಔಷಧ ಚೀನಾ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ಔಷಧವಾಗಿದೆ.

ಚೀನಾದಲ್ಲಿ ಡಾ. ರೆಡ್ಡಿ ಲ್ಯಾಬೋರೇಟರೀಸ್ ಲಿಮಿಟೆಡ್ ತನ್ನ ಜಂಟಿ ಸಹಭಾಗಿತ್ವದ ಮೂಲಕ ರೋಟಮ್ ಗ್ರೂಪ್ ಆಫ್ ಕೆನಡಾದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಚೈನಾದ ಹೊರತಾಗಿಯೂ ಈ ಕಂಪನಿ ಯುಎಸ್, ರಷ್ಯಾ ಮತ್ತು ಯೂರೋಪ್ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss