ಚೀನಾ ಜನಸಂಖ್ಯೆಯಲ್ಲಿ ಭಾರೀ ಕುಸಿತ, 1961ರ ಬಳಿಕ ಇದೇ ಮೊದಲು !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇತಿಹಾಸದಲ್ಲೇ ಇದೇ ಮೊದಲು ಎನ್ನುವ ಸಂಗತಿಗೆ ಚೀನಾ ಹೆಸರಿಸಿದೆ. 1961 ರಿಂದ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯು ಕಳೆದ ವರ್ಷ ಕುಸಿತ ಕಂಡಿದೆ.

ಐತಿಹಾಸಿಕ ಘಟನೆಯಿದಾಗಿದ್ದು, 2023 ರಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಒಂದು ವರ್ಷದ ಹಿಂದಿನ 1.41260 ಶತಕೋಟಿಗೆ ಹೋಲಿಸಿದರೆ 2022 ರ ಅಂತ್ಯದ ವೇಳೆಗೆ ಚೀನಾ ದೇಶವು 1.41175 ಶತಕೋಟಿ ಜನರನ್ನು ಹೊಂದಿತ್ತು ಎಂದು ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!