ಕೋವಿಡ್‌ ವ್ಯಾಕ್ಸೀನ್‌ ಗಾಗಿ ʼಹಾಂಗ್‌ಕಾಂಗ್‌ʼಗೆ ಹಾರುತ್ತಿದ್ದಾರೆ ಚೀನಿಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಶೂನ್ಯ ಕೋವಿಡ್‌ ನೀತಿಗಳನ್ನು ತೆಗೆದುಹಾಕಿದಾಗಿನಿಂದ ಚೀನಾದಲ್ಲಿ ಕೋವಿಡ್‌ ಪರಿಸ್ಥಿತಿ ಹದಗೆಟ್ಟಿದ್ದು ದಿನೇ ದಿನೇ ಸಾವುಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೋವಿಡ್‌ ನಿಂದ ಸಾವನ್ನಪ್ಪಿರುವ ಸಂಖ್ಯೆಯನ್ನು ಎಣಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಚೀನಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಔಷಧೀಯ ಸಾಮಗ್ರಿಗಳು, ಮಾತ್ರೆಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದೇ ಚೀನಿಯರು ಭಾರತೀಯ ಜೆನರಿಕ್‌ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಸೋಂಕಿನ ವಿರುದ್ಧ ಲಸಿಕೆ ಪಡೆಯಲು ಚೀನಾದ ಮುಖ್ಯ ಭಾಗದಿಂದ ಜನರು ಹಾಂಗ್‌ ಕಾಂಗ್‌ ಗೆ ದೌಡಾಯಿಸುತ್ತಿದ್ದಾರೆ.

ಮೂಲಗಳ ವರದಿಯ ಪ್ರಕಾರ, ಚೀನಾ ಮುಖ್ಯಭಾಗದಲ್ಲಿ ಕೋವಿಡ್‌ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಎಂಆರ್‌ಎನ್‌ಎ ಲಸಿಕೆಯು ಚೀನಾದ ಮುಖ್ಯಭಾಗದಲ್ಲಿ ಲಭ್ಯವಿಲ್ಲ. ಆದರೆ ಹಾಂಗ್‌ ಕಾಂಗ್‌ ನ ಆಸ್ಪತ್ರೆಯಲ್ಲಿ ಈ ಲಸಿಕೆಗಳು ಲಭ್ಯವಿದ್ದು ಇದನ್ನು ಪಡೆಯಲು ಚೀನಾದ ಮುಖ್ಯ ಭಾಗದಿಂದ ಜನರು ಹಾಂಗ್‌ ಕಾಂಗ್‌ ನತ್ತ ತೆರಳುತ್ತಿದ್ದಾರೆ.

ಮೂರು ವರ್ಷಗಳ ನಂತರ ಚೀನಾ ಸರ್ಕಾರವು ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಜನರು ಯಾವುದೇ ಅಡತಡೆಗಳಿಲ್ಲದೇ ಹಾಂಗ್‌ ಕಾಂಗ್‌ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಈಗಾಗಲೇ ಹಲವಾರು ಜನರಿಗೆ ಲಸಿಕೆ ನೀಡಲಾಗಿದ್ದು ಆಸ್ಪತ್ರೆಗೆ ಬರಲು ಇನ್ನೂ ಅನೇಕರು ವಿಚಾರಣೆ ನಡೆಸಿದ್ದಾರೆ. ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿರುವುದಾಗಿ ಮೂಲಗಳ ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!