ಪತ್ರಕರ್ತರ ಟ್ರ್ಯಾಕ್‌ ಮಾಡಲು ಟಿಕ್‌ಟಾಕ್‌ ಡೇಟಾ ಬಳಸಿಕೊಂಡಿರುವುದಾಗಿ ಒಪ್ಪಿಕೊಂಡ ಚೀನೀ ಕಂಪನಿ ʼಬೈಟ್‌ಡಾನ್ಸ್ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪತ್ರಕರ್ತರ ಟ್ರ್ಯಾಕ್‌ ಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಿಂದ ಡೇಟಾವನ್ನು ಚೀನಾದ ʼಬೈಟ್‌ಡಾನ್ಸ್ʼ ಕಂಪನಿಯ ಉದ್ಯೋಗಿಗಳು ಬಳಸಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ವರದಿಯ ಪ್ರಕಾರ ಪತ್ರಕರ್ತರ ಮಾಹಿತಿ ಸೋರಿಕೆ ಮೂಲವನ್ನು ಪತ್ತೆ ಹಚ್ಚಲು ಬೈಟ್‌ಡಾನ್ಸ್‌ ಕಂಪನಿಯ ಉದ್ಯೋಗಿಗಳು ಅವರ ಟಿಕ್‌ಟಾಕ್‌ ಡೇಟಾವನ್ನು ಬಳಸಿಕೊಂಡಿರುವುದಾಗಿ ಕಂಪನಿಯು ಒಪ್ಪಿಕೊಂಡಿದೆ.

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಮಾಡುವ ಕುರಿತಾಗಿ ವರದಿಗಳಾಗಿದ್ದವು. ಬಳಕೆದಾರರ ಡೇಟಾ ಗೌಪ್ಯತೆಯನ್ನು ರಕ್ಷಿಸಲಾಗಿದೆ ಮತ್ತು ಇದು ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್‌ನಂತಹ ಪ್ರಮುಖ ಮಾರುಕಟ್ಟೆಗಳ ಗ್ರಾಹಕರು ಮತ್ತು ಸರ್ಕಾರಗಳಿಗೆ ಮನವರಿಕೆ ಮಾಡಲು ಟಿಕ್‌ಟಾಕ್ ಸಾಕಷ್ಟು ಪ್ರಯತ್ನಿಸಿತ್ತು. ಆದರೆ ಈಗ ಅದರ ಪೋಷಕ ಕಂಪನಿ ಬೈಟ್‌ ಡಾನ್ಸ್‌ ಟಿಕ್‌ಟಾಕ್‌ ಡೇಟಾವನ್ನು ಬಳಸಿಕೊಂಡಿರುವುದಾಗಿ ಒಪ್ಪಿಕೊಂಡಿದೆ. ಮಾಧ್ಯಮಗಳಿಗೆ ಕಂಪನಿಯ ಮಾಹಿತಿಯ ಸೋರಿಕೆಯ ಆಂತರಿಕ ತನಿಖೆಯ ಭಾಗವಾಗಿ ಕಂಪನಿಯ ಕೆಲ ಉದ್ಯೋಗಿಗಳು ಟಿಕ್‌ಟಾಕ್‌ ಡೇಟಾವನ್ನು ಬಳಸಿಕೊಂಡಿದ್ದಾರೆ ಎಂದು ಕಂಪನಿ ಹೇಳಿದೆ. ಅಲ್ಲದೇ ಈ ಮಾಹಿತಿಯು ತಿಳಿದ ನಂತರ ಕಂಪನಿಯ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿದ್ದಕ್ಕಾಗಿ ಆ ಉದ್ಯೋಗಿಗಳನ್ನು ಹೊರಹಾಕಿರುವುದಾಗಿ ಕಂಪನಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಮಾಹಿತಿ ಗೌಪ್ಯತೆಗೆ ಧಕ್ಕೆ ಹಾಗು ಭದ್ರತಾ ಅಪಾಯಗಳ ಹಿನ್ನೆಲೆಯಲ್ಲಿ ಟಿಕ್‌ಟಾಕ್‌ ಅನ್ನು ಬ್ಯಾನ್‌ ಮಾಡಲು ಅಮೆರಿಕ ಚಿಂತಿಸಿದೆ. ಈ ವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಾಗರಿಕರ ವೃತ್ತಿಪರ ಫೋನ್‌ಗಳಲ್ಲಿ ಟಿಕ್‌ಟಾಕ್ ಬಳಕೆಯನ್ನು ನಿಷೇಧಿಸುವ ಕಾನೂನನ್ನು ಅಳವಡಿಸಿಕೊಳ್ಳಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!