ತೈವಾನ್‌ ಗಡಿಯಲ್ಲಿ ಮತ್ತೆ ಚೀನಾ ಮಿಲಿಟರಿ ಪುಂಡಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದೆಡೆ ಕೋವಿಡ್‌ ಮಹಾಮಾರಿಯಿಂದ ಒಳಗೊಳಗೇ ತತ್ತರಿಸಿಹೋಗಿರುವ ಚೀನಾ ಇನ್ನೊಂದೆಡೆ ತೈವಾನ್‌ ಗಡಿಯಲ್ಲಿ ಪುಂಡಾಟ ಮುಂದುವರೆಸಿದೆ. ದ್ವೀಪ ರಾಷ್ಟ್ರ ತೈವಾನ್‌ ಮೇಲೆ ಬಹಳ ಕಾಲದಿಂದ ತನ್ನ ಹಕ್ಕು ಸಾಧಿಸುವ ಪ್ರಯತ್ನದಲ್ಲಿ ಚೀನಾವು ಗಡಿಯಲ್ಲಿ ಮಿಲಿಟರಿ ತಂಟೆಗಳನ್ನು ನಡೆಸುತ್ತಲೇ ಇದೆ.ಇದೀಗ ಭಾನುವಾರ ಮತ್ತೊಮ್ಮೆ ತೈವಾನ್‌ ಗಡಿ ಪ್ರದೇಶದಲ್ಲಿ ಚೀನಾ ಮಿಲಿಟರಿ ಪಡೆಗಳು ಕಾರ್ಯಾಚರಣೆಗಳನ್ನು ನಡೆಸಿವೆ. ಇದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಕಾರ್ಯಾಚರಣೆಯಾಗಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥಿಯೇಟರ್ ಕಮಾಂಡ್ ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ ತನ್ನ ಪಡೆಗಳು ತೈವಾನ್ ಸುತ್ತಮುತ್ತಲಿನ ಸಮುದ್ರ ಮತ್ತು ವಾಯುಪ್ರದೇಶದಲ್ಲಿ “ಜಂಟಿ ಯುದ್ಧ ಸನ್ನದ್ಧತೆ ಗಸ್ತು ಮತ್ತು ನೈಜ ಯುದ್ಧ ಡ್ರಿಲ್”ಗಳನ್ನು ನಡೆಸಿದೆ ಎಂದು ಹೇಳಿದೆ. ಜಂಟಿ ಯುದ್ಧ ಸಾಮರ್ಥ್ಯಗಳನ್ನು ಪರೀಕ್ಷಿಸುವುದು ಮತ್ತು ಬಾಹ್ಯ ಶಕ್ತಿಗಳು ಮತ್ತು ತೈವಾನ್ ಸ್ವಾತಂತ್ರ್ಯ ಪ್ರತ್ಯೇಕತಾವಾದಿ ಶಕ್ತಿಗಳ ಪ್ರಚೋದನಕಾರಿ ಕ್ರಮಗಳನ್ನುಎದುರಿಸುವುದು ಈ ವ್ಯಾಯಾಮದ ಗುರಿ ಎಂದು ಚೀನಾದ ಮಿಲಿಟರಿ ಹೇಳಿದೆ.

ಚೀನಾ ಕಳೆದ ತಿಂಗಳ ಕೊನೆಯಲ್ಲಿ ಇದೇ ರೀತಿಯ ವ್ಯಾಯಾಮಗಳನ್ನು ನಡೆಸಿತ್ತು, ತೈವಾನ್ 43 ಚೀನೀ ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದೆ ಎಂದು ಹೇಳಿತ್ತು. ಅಲ್ಲದೇ ಪರಮಾಣು ಬಾಂಬ್‌ ಸಾಮರ್ಥ್ಯದ ಯುದ್ಧ ವಿಮಾನಗಳನ್ನೂ ಚೀನಾ ತೈವಾನ್‌ ಗಡಿಯಲ್ಲಿ ಹಾರಾಟ ನಡೆಸಿತ್ತು. ಇದೀಗ ಮಿಲಿಟರಿ ಕಾರ್ಯಾಚರಣೆಗಳ ಮೂಲಕ ಚೀನಾವು ಮತ್ತೊಮ್ಮೆ ಪುಂಡಾಟ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!