ಹಿಂದೂ ಮಹಾಸಾಗರದ ಮೇಲೆ ಬಿದ್ದ ಚೀನೀ ರಾಕೆಟ್: ಮಾಹಿತಿ ಮುಚ್ಚಿಟ್ಟಿದ್ದೇಕೆ ಚೀನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಚೀನಾ ಉಡಾವನೆ ಮಾಡಿದ್ದ ರಾಕೆಟ್ ಶನಿವಾರ ಹಿಂದೂ ಮಹಾಸಾಗರದ ಮೇಲೆ ಬಿದ್ದಿದೆ. ಆದರೆ ಎಲ್ಲಿ ಬಿದ್ದಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಚೀನಾ ಹಿಂದೇಟು ಹಾಕುತ್ತಿದೆ ಎಂದು ನಾಸಾ ಹೇಳಿದೆ.
ʼಲಾಂಗ್ ಮಾರ್ಚ್ 5ʼ ʼಬಿʼ ರಾಕೆಟ್ ಶನಿವಾರ ಮಧ್ಯಾಹ್ನ 12:45 ಕ್ಕೆ ಹಿಂದೂ ಮಹಾಸಾಗರದ ಮೇಲೆ ಬಿದ್ದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಬಾಹ್ಯಾಕಾಶ ಕಕ್ಷೆಯಲ್ಲಿ ನಿರ್ಮಾಣ ಹಂತದಲ್ಲಿರುವ ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯೋಗಾಲಯ ವಸ್ತುಗಳನ್ನು ಪೂರೈಸಲು ಚಿನಾ ಲಾಂಗ್ ಮಾರ್ಚ್ ರಾಕೆಟ್‌ ಅನ್ನು ಜುಲೈ 24 ರಂದು ಉಡಾಯಿಸಿತ್ತು.
“ಎಲ್ಲಾ ಅಂತರಿಕ್ಷಯಾನ ರಾಷ್ಟ್ರಗಳು ಉತ್ತಮ ನಡಾವಳಿಕೆಗಳನ್ನು ಪ್ರದರ್ಶಿಸಬೇಕು. ಮತ್ತು ಉಪಗ್ರಹಗಳಿಂದ ಎದುರಾಗುವ ಸಂಭಾವ್ಯ ಅಪಾಯವನ್ನು ತಡೆಯಲು ಮುಂಚಿತವಾಗಿ ಈ ರೀತಿಯ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. “ಹಾಗೆ ಮಾಡುವುದುದರಿಂದ ವಿವಿಧ ದೇಶಗಳಿಗೆ ಸೇರಿದ ಸ್ಥಳಗಳ ಜವಾಬ್ದಾರಿಯುತ ಬಳಕೆಗೆ ಮತ್ತು ಭೂಮಿಯ ಮೇಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.
ಮಲೇಷ್ಯಾದ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಕೆಟ್ ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬೀಳುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಸುಮಾರು  22.5 ಟನ್‌ಗಳಷ್ಟು (ಸುಮಾರು 48,500 ಪೌಂಡ್) ತೂಕದ ಉಪಗ್ರಹ ಭೂಮಿಯ ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದರೆ ಬಾರೀ ಅವಘಡ ಸಂಭವಿಸುವ ಸಾಧ್ಯತೆ ಇತ್ತು ಎಂದು ನಾಸಾ ಅಭಿಪ್ರಾಯಪಟ್ಟಿದೆ. ಈ ವಿಚಾರದಲ್ಲಿ ಚೀನಾ ಬೇಜವಾಬ್ದಾರಿಯುತ ನಡವಳಿಕೆ ತೋರಿದೆ ಎಂದು ನಾಸಾ ದೂಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!