Monday, August 8, 2022

Latest Posts

ಚಿನೂಕ್, ಹೌವಿಟ್ಜಾರ್, ದೇಸಿ ಕ್ಷಿಪಣಿ- ಚೀನಾ ಗಡಿಯಲ್ಲಿ ಹೀಗೆ ಸಿದ್ಧವಾಗಿದೆ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಢಾಕಿನಲ್ಲಿ ಸಂಘರ್ಷವಾದ ನಂತರ ಭಾರತ ಮತ್ತು ಚೀನಾ ಪರಸ್ಪರ ಹಿಂತೆಗೆದಿದ್ದರೂ, ಮತ್ತೆ ಚೀನಾ ಯಾವುದೇ ಸಮಯದಲ್ಲಿ ತನ್ನ ಆಕ್ರಮಣಕಾರಿ ಧೋರಣೆ ತೋರುವ ಸಾಧ್ಯತೆ ದಟ್ಟವಾಗಿದೆ. ಅದು ತನ್ನ ಗಡಿಭಾಗದಲ್ಲಿ ಮಿಲಿಟರಿ ಶಕ್ತಿ ಹೆಚ್ಚಿಸಿಕೊಂಡಿದೆ ಎಂಬ ವರದಿಗಳನ್ನು ಆಗಾಗ ಓದುತ್ತಿರುತ್ತೇವೆ. ಇದೀಗ, ಭಾರತೀಯ ಸೇನೆಯೂ ರಕ್ಷಣಾ ವಿಷಯಗಳನ್ನು ವರದಿ ಮಾಡುವ ಕೆಲವು ಪತ್ರಕರ್ತರನ್ನು ಕರೆದೊಯ್ದು ಗಡಿಯಲ್ಲಿ ತನ್ನ ತಯಾರಿಯನ್ನು ವಿವರಿಸಿದೆ. ಈ ಪ್ರತ್ಯಕ್ಷದರ್ಶಿ ವರದಿಗಳ ಪ್ರಕಾರ ಭಾರತವೂ ತನ್ನ ಗಡಿಯಲ್ಲಿ ಭರ್ಜರಿಯಾಗಿಯೇ ಬಲವನ್ನು ವೃದ್ಧಿಸಿಕೊಂಡಿದೆ.

ಭಾರತವು ಇತ್ತೀಚೆಗೆ ಖರೀದಿಸಿರುವ ಯುಎಸ್ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಚೀನಾದೊಂದಿಗಿನ ತನ್ನ ಗಡಿಯುದ್ದಕ್ಕೂ ನಿಯೋಜಿಸಿದೆ. ಹಿಮಾಲಯದಲ್ಲಿನ ವಿವಾದಿತ ಭೂಪ್ರದೇಶದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಆಕ್ರಮಣಕಾರಿ ಶಕ್ತಿಯ ಭಾಗ ಇದಾಗಿದೆ.

ಭಾರತದ ಈಶಾನ್ಯದಲ್ಲಿರುವ ಭೂತಾನ್ ಮತ್ತು ಟಿಬೆಟ್‌ಗೆ ಹೊಂದಿಕೊಂಡಿರುವ ತವಾಂಗ್ ಪ್ರಸ್ತಭೂಮಿಯ ಮೇಲೆ ಭಾರತದ ಮಿಲಿಟರಿ ನಿಯೋಜನೆಗಳನ್ನು ಹೆಚ್ಚಿಸಲಾಗಿದೆ. ಭಾರತದ ನಿಯಂತ್ರಣದಲ್ಲಿರುವ ಈ ಭಾಗವನ್ನು ಚೀನಾ ತನ್ನದೆಂದು ಹೇಳುತ್ತಿದೆ. 1959 ರಲ್ಲಿ ದಲೈಲಾಮಾ ಚೀನಾದ ಮಿಲಿಟರಿ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಹತ್ತಿರದ ಪರ್ವತಗಳ ಹಾದಿ ಬಳಸಿ ಭಾರತಕ್ಕೆ ಬಂದಿದ್ದು ಇದೇ ಪ್ರದೇಶ ಪ್ರವೇಶಿಸುವ ಮೂಲಕ. ಈಗ ಆ ನೆಲದಲ್ಲಿ ಭಾರತದ ಕಡೆಯಿಂದ ಅಮೆರಿಕನ್ ನಿರ್ಮಿತ ಚಿನೂಕ್ ಹೆಲಿಕಾಪ್ಟರ್‌ಗಳು, ಹೊವಿಟ್ಜರ್‌ಗಳು ಫಿರಂಗಿಗಳು, ರೈಫಲ್‌ಗಳು ಮತ್ತು ದೇಶೀಯವಾಗಿ ತಯಾರಿಸಿದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಹೊಸ ಕಣ್ಗಾವಲು ವ್ಯವಸ್ಥೆ ಎಲ್ಲವೂ ಸ್ಥಾಪಿತವಾಗಿವೆ.

ಬೂಟುಗಳು, ರಕ್ಷಾಕವಚ, ಫಿರಂಗಿ ಮತ್ತು ವೈಮಾನಿಕ ಬೆಂಬಲ ಇವೆಲ್ಲವನ್ನೂ ಸಂಯೋಜಿಸಲಾಗಿದೆ. ಈ ಸಂಯೋಜನೆಯಿಂದ ಕ್ಷಿಪ್ರವಾಗಿ ಕಾರ್ಯಾಚರಣೆ ಮಾಡುವುದು ಸಾಧ್ಯವಾಗುತ್ತದೆ. ಯುದ್ಧ ಮಾಡುವ ಹಾಗೂ ಸಮರಕ್ಕೆ ಸಹಕರಿಸುವ ಎಲ್ಲ ಗುಂಪುಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದಿದ್ದಾರೆ ಈಸ್ಟರ್ನ್ ಆರ್ಮಿ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss