Tuesday, August 16, 2022

Latest Posts

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರಿಗೆ ಅಧಿಕಾರ ಹಸ್ತಾಂತರ

ಹೊಸದಿಗಂತ ವರದಿ,ಕಲಬುರಗಿ:

ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಂದ 9ನೇ ಪೀಠಾಧಿಪತಿಯಾಗಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಅಧಿಕಾರ ಸ್ವೀಕರಿಸುವ ಮೂಲಕ 200 ವರ್ಷಗಳ ಹಳೆಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಹೊಸ ಯುಗ ಉದಯವಾಯಿತು.

ನವೆಂಬರ್ 01, 2017 ರಂದು ಜನಿಸಿದ 5 ವರ್ಷದ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ದಾಸೋಹದ ಪರಿಕಲ್ಪನೆಯನ್ನು ಪರಿಚಯಿಸಿದ 19 ನೇ ಶತಮಾನದ ಸಂತ ಶರಣಬಸವೇಶ್ವರರು 200 ವರ್ಷಗಳ ಹಿಂದೆ ಸ್ಥಾಪಿಸಿದ ಶರಣಬಸವೇಶ್ವರ ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳಲ್ಲಿ ಕಿರಿಯರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಶರಣಬಸವೇಶ್ವರ ಪುಣ್ಯಕ್ಷೇತ್ರ ಮತ್ತು ಇತರ ಧಾರ್ಮಿಕ ಮಠಗಳಲ್ಲಿ ಇಂದಿಗೂ ಅನುಸರಿಸುತ್ತಿರುವ ನಿರ್ಗತಿಕರಿಗೆ ಹಾಗೂ ಬಡವರಿಗೆ ಅನ್ನ ದಾಸೋಹದ ಪರಿಕಲ್ಪನೆಯನ್ನು ಪರಿಚಯಿಸಿದವರು.

ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಸಂಸ್ಥಾನದ ನೂತನ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರಿಗೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರು ಅಧಿಕಾರ ಹಸ್ತಾಂತರಿಸಿ ಮಾತನಾಡುತ್ತಾ ಸಂಸ್ಥಾನದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ, ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನ, ಪೂಜಾ ಕೈಂಕರ್ಯಗಳನ್ನು ನಡೆಸುವ ಅಧಿಕಾರವನ್ನು ನನ್ನ ಪುತ್ರ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರಿಗೆ ಹಸ್ತಾಂತರಿಸುತ್ತಿದ್ದೇನೆ ಎಂದರು. ಅಪಾರ ಸಂಖ್ಯೆಯ ಭಕ್ತರು ಮತ್ತು ವಿವಿಧ ವೀರಶೈವ ಮಠಗಳ ಹಿರಿಯ ಮುಖಂಡರ ಹμÉರ್ೂೀದ್ಗಾರಗಳ ಮಧ್ಯೆ “ನನ್ನ ಮಗ ಚಿರಂಜೀವಿ ದೊಡ್ಡಪ್ಪ ಅಪ್ಪನವರನ್ನು ಶರಣಬಸವೇಶ್ವರ ಸಂಸ್ಥಾನಕ್ಕೆ ನನ್ನ ಉತ್ತರಾಧಿಕಾರಿ ಎಂದು ಘೋಷಿಸುತ್ತೇನೆ” ಎಂದರು.

ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚೆರ ಪರಸನ್ ದಾಕ್ಷಾಯಿಣಿ ಅಮ್ಮನವರು, ಸೇರಿದಂತೆ ವಿವಿಧ ಸ್ವಾಮೀಜಿಗಳು ಮಾತನಾಡಿದರು. ಜಿಲ್ಲಾಡಳಿತ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss