ಕೇಂದ್ರ ಮಹಿಳಾ ಆಯೋಗದಲ್ಲಿ ನಟಿ ಖುಷ್ಬೂಗೆ ಸ್ಥಾನ: ಚಿರಂಜೀವಿ ಅಭಿನಂದನೆ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿನಿಮಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರಿಗೆ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಲಾಗಿದೆ. 2010ರಲ್ಲಿ ಡಿಎಂಕೆ ಸೇರಿ ರಾಜಕೀಯ ಜೀವನ ಆರಂಭಿಸಿದ ಖುಷ್ಬೂ ನಂತರ ಕಾಂಗ್ರೆಸ್ ಪಕ್ಷ ಸೇರಿ ಈಗ ಬಿಜೆಪಿ ಪಕ್ಷದಲ್ಲಿ ಮುಂದುವರಿದಿದ್ದಾರೆ. ಕೇಂದ್ರ ಸರ್ಕಾರದ ಮಹಿಳಾ ಆಯೋಗದ ನಾಮನಿರ್ದೇಶನದಲ್ಲಿ ಖುಷ್ಬೂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಇದನ್ನು ಖುಷ್ಬೂ ಫೆಬ್ರವರಿ 27 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡರು.

ಇಂತಹ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಲು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಪೋಸ್ಟ್ ಮಾಡಿದ್ದಾರೆ. ಆಕೆಗೆ ಈ ಸ್ಥಾನ ಸಿಕ್ಕಿರುವುದಕ್ಕೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಕೂಡ ಖುಷ್ಬೂ ಅವರನ್ನು ಅಭಿನಂದಿಸಿದ್ದಾರೆ.

“ನೀವು ಖಂಡಿತವಾಗಿಯೂ ಈ ಹುದ್ದೆಗೆ ಅರ್ಹರು. ನೀವು ಮಹಿಳೆಯರಿಗೆ ಪ್ರಬಲ ಧ್ವನಿಯಾಗುತ್ತೀರಿ ಎಂದು ನಾನು ಭಾವಿಸುತ್ತೇನೆ, ಮಹಿಳೆಯರ ಎಲ್ಲಾ ಸಂಬಂಧಿತ ಸಮಸ್ಯೆಗಳಿಗೆ ಹೆಚ್ಚಿನ ಗಮನವನ್ನು ನೀಡುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ತೋರಿಸುತ್ತೀರಿ. ಈ ಹುದ್ದೆ ಸಿಕ್ಕಿರುವುದಕ್ಕೆ ನನ್ನ ಶುಭಾಶಯಗಳು,” ಎಂದು ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ಖುಷ್ಬೂ ಜೊತೆಗೆ ಮಮತಾ ಕುಮಾರಿ ಮತ್ತು ಡೆಲಿನಾ ಖೋಂಗ್ ಡುಪ್ ಕೂಡ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!