ಹೊಸ ದಿಗಂತ ವರದಿ,ಚಿತ್ರದುರ್ಗ :
ಸಿಡಿಲು ಬಡಿದ ಪರಿಣಾಮ ರೊಪ್ಪದಲ್ಲಿ ಕೂಡಿ ಹಾಕಿದ್ದ ೧೦೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ಕುರಿಗಳು ಗ್ರಾಮದ ಆಂಜಿನಪ್ಪ ಅವರ ೯೦ ಹಾಗೂ ಓಬಯ್ಯ ಅವರ ೧೬ ಕುರಿಗಳು ಎಂದು ತಿಳಿದುಬಂದಿದೆ. ರಾತ್ರಿ ೧೦ರ ಸಮಯದಲ್ಲಿ ವಿಪರೀತ ಮಳೆ ಆರಂಭವಾಗಿ ಗುಡುಗು, ಮಿಂಚು ಸೇರಿದಂತೆ ಮಳೆಯ ಆರ್ಭಟ ಹೆಚ್ಚಾಯಿತು.
ಇದೇ ಸಂದರ್ಭದಲ್ಲಿ ಸಿಡಿಲು ಬಡಿದು ಒಟ್ಟು ೧೦೬ ಕುರಿಗಳು ಸಾವನಪ್ಪಿವೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ರೇಹಾನ್‌ಪಾಷ, ಪಶುವೈದ್ಯಾಧಿಕಾರಿ ರೇವಣ್ಣ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತಪಟ್ಟ ಕುರಿಗಳ ಶವಪರೀಕ್ಷೆ ನಡೆಸಲಾಗಿದೆ.