ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಚಿತ್ರದುರ್ಗ:
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ ತಂದು ಕೊಟ್ಟ ಅನೇಕ ಮಹನೀಯರ ತತ್ವ ಆರ್ದಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಭೌತಿಕ ಬೆಳವಣಿಗೆಯೊಂದಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ಬಲಿಷ್ಟ ಭಾರತ ನಿರ್ಮಾಣ ಮಾಡಬೇಕೆಂದು ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಚಂದ್ರವಳ್ಳಿಯ ಎಸ್.ಜೆ.ಎಂ. ಕಾಲೇಜಿನ ಜವತಿಯಿಂದ ಹಮ್ಮಿಕೊಂಡಿದ್ದ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಫಿಟ್ ಇಂಡಿಯಾ ಜಾಗೃತಿ ಜಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾಕೂಟಗಳು ಅವಶ್ಯಕವಾಗಿದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿ ದೇಶಕ್ಕೆ ಕಿರ್ತಿ ತರಬೇಕು ಎಂದರು.
ಅನೇಕರು ಹೋರಾಟ ಮಾಡಿ ಸ್ವಂತಂತ್ರ ತಂದುಕೊಟ್ಟರು. ಜಗತ್ತಿನಲ್ಲಿ ಭಾರತ ಸ್ವಾತಂತ್ರದಿಂದ ಸಾಕಷ್ಟು ಅಭಿವೃದ್ದಿಯಾಗಿದ್ದು, ಇದನ್ನು ಉಳಿಸುವುದು ವಿದ್ಯಾರ್ಥಿ ಯವಜನರಿಂದ ಮಾತ್ರ ಸಾಧ್ಯ. ಭಾರತದ ಸ್ವಾತಂತ್ರಕ್ಕಾಗಿ ಅನೇಕರು ತ್ಯಾಗ ಬಲಿದಾನದಿಂದ ಸ್ವಾತಂತ್ರದಿಂದ ಅಮೃತ ಮಹೋತ್ಸವ ಅಚರಿಸುತ್ತಿರುವುದು ಸಂತಸಕ್ಕೆ ಕಾರಣವಾಗಿದೆ. ದೇಶಾಭಿಮಾನ ಹಾಗೂ ರಾಷ್ಟ್ರೀಯತೆ ಬೆಳೆಸಿಕೊಳ್ಳಬೇಕು. ಸ್ವಾತಂತ್ರಕ್ಕಾಗಿ ಶ್ರಮಿಸಿದವರನ್ನು ಸ್ಮರಣೆ ಮಾಡುವುದರೊಂದಿಗೆ ಭವ್ಯ ಭಾರತ ನಿರ್ಮಾಣ ಮಾಡಬೇಕಾಗಿದೆ ಎಂದು ತಿಳಿಸಿದರು.
ಎಸ್.ಜೆ.ಎಂ ವಿದ್ಯಾಪೀಠದ ನಿರ್ದೇಶಕ ಪಟೇಲ್ ಶಿವಕುಮಾರ್ ಮಾತನಾಡಿ, ಸ್ವಾತಂತ್ರ ಬಂದಿರುವುದು ನಮ್ಮ ದುಷ್ಟತನಕ್ಕಲ್ಲ. ಸ್ವಾತಂತ್ರ ಉತ್ತಮ ರೀತಿಯಲ್ಲಿ ಇರಬೇಕು. ಇಂದು ಯುವಜನತೆ ಅನೇಕ ಹೀನ ಕೃತ್ಯಗಳು ಹಾಗೂ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೀವನ ಸಾರ್ಥಕ ರೀತಿಯಲ್ಲಿ ಬದುಕಬೇಕಾದರೆ ಸನ್ನಡತೆ, ಶಿಸ್ತು, ಶ್ರದ್ಧೆ, ಉತ್ತಮ ಸಂಸ್ಕೃತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಉಪಸ್ಥಿತರಿದ್ದರು. ಎಸ್.ಜೆ.ಎಂ. ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಡಾ.ಕೆ.ಸಿ.ರಮೇಶ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಅರ್.ಕೆ.ಕೇದಾರನಾಥ್ ವಂದಿಸಿದರು.
ನಂತರ ೭೫ನೇ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಸದೃಡ ಭಾರತಕ್ಕಾಗಿ ಸ್ವಾತಂತ್ರ ಓಟ ಹಾಗೂ ಜಾಗೃತಿ ಜಾಥಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು. ಈ ಜಾಗೃತಿ ಜಾಥ ಕಾಲೇಜಿನ ಅವರಣದಿಂದ ವಿದ್ಯಾರ್ಥಿಗಳು ಕನಕವೃತ್ತ, ಸಂಗೊಳ್ಳಿರಾಯಣ್ಣವೃತ್ತ, ಗಾಂಧಿ ಸರ್ಕಲ್, ಮುಖಾಂತರ ತೆರಳಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿರುವ ಒನಕೆ ಓಬ್ಬವ್ವ ಸರ್ಕಲ್ ಬಳಿ ಮುಕ್ತಾಯಗೊಂಡಿತ್ತು.