spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೌಡಕೊಡ್ಲು ಪ್ರದೇಶದಲ್ಲಿ ಸಾಗವಾನಿ ಮರಗಳ ಮಾರಣಹೋಮ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸ ದಿಗಂತ ವರದಿ, ಶಿರಸಿ:

ಇಲ್ಲಿನ ಎಂಕ್ಕಂಬಿ ಅರಣ್ಯ ಪ್ರದೇಶದ ಚೌಡಿಕೊಡ್ಲು ಸಾಗವಾನಿ ನೆಡುತೋಪಿನ ವ್ಯಾಪ್ತಿಯಲ್ಲಿ ಬೆಲೆಬಾಳುವ ಮರಗಳ ಕಳ್ಳತನ ನಡೆದಿದೆ.
ಬನವಾಸಿ ಅರಣ್ಯ ವಲಯದ ಎಕ್ಕಂಬಿ- ಬಿಸಲಕೊಪ್ಪ ಹೋಗುವ ಮಾರ್ಗ ಮಧ್ಯದ ಚೌಡಕೊಡ್ಲು ಪ್ರದೇಶದಲ್ಲಿ ಸಾಗವಾನಿ ಮರಗಳ  ಮಾರಣಹೋಮ ನಡೆದಿದೆ. ಸಾಗವಾನಿ ನೆಡುತೋಪಿನಲ್ಲಿ ತಿಂಗಳಿನಿಂದೀಚೆಗೆ 25ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಿಸಲಾಗಿದೆ.
ಕನಿಷ್ಠ 2ಅಡಿಯಿಂದ 4 ಅಡಿ ಸುತ್ತಳತೆಯ ಮರಗಳು ಗರಗಸಕ್ಕೆ ಬಲಿಯಾಗಿವೆ. ಈ ಕುರಿತು ಸ್ಥಳೀಯರು ಇಲಾಖೆ ಕಾರ್ಯವೈಖರಿಯ
ಬಗ್ಗೆ ದೂರುತ್ತಿದ್ದಾರೆ.

25ಕ್ಕೂ ಹೆಚ್ಚು ಮರಗಳು
ಇತ್ತೀಚೆಗೆ ನೆಡುತೋಪಿನಲ್ಲಿ ಮರಗಳ ಕಟಾವು ನಡೆದಿದ್ದು, ಅರಣ್ಯಗಳ್ಳರು ಈ ಕೃತ್ಯದಲ್ಲಿ ನಿರತರಾಗಿದ್ದಾರೆ. ನಿತ್ಯವೂ ಮರಗಳನ್ನು
ಕಟಾವು ಮಾಡುತ್ತಿರುವ ಬಗ್ಗೆ ಅನುಮಾನವಿದ್ದು, ಇಲಾಖೆಯ ಗಮನಕ್ಕೂ ತರಲಾಗಿದೆ. ಆದರೆ ಈ ಬಗ್ಗೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಈಗಾಗಲೇ 25ಕ್ಕೂ ಹೆಚ್ಚು ಮರಗಳು ಮರಗಳ್ಳರ ಪಾಲಾಗಿದ್ದು, ಇನ್ನಷ್ಟು ಮರಗಳು ಕಟಾವಾಗಿರುವ ಶಂಕೆಯಿದೆ. ಇದು ಹಲವು ಅನುಮಾನಕ್ಕೆ ಎಡೆಮಾಡಿದೆ ಎನ್ನುತ್ತಾರೆ ಸ್ಥಳೀಯರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss