ಇಮ್ರಾನ್‌ ಪದಚ್ಯುತಿ ವಿರೋಧಿಸಿ ಪಾಕ್‌ ನಲ್ಲಿ ಬೃಹತ್‌ ಪ್ರತಿಭಟನೆ; ಸೇನೆ ವಿರುದ್ಧ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಕ್‌ ಪ್ರದಾನಿ ಹುದ್ದೆಯಿಂದ ಇಮ್ರಾನ್‌ ಖಾನ್‌ ಪದಚ್ಯುತಿ ವಿರೋಧಿಸಿ ಅಲ್ಲಿನ ಜನ ಪಂಜಾಬ್ ಪ್ರಾಂತ್ಯದ ಲಾಲ್ ಹವೇಲಿಯಲ್ಲಿ ಸೇನೆ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ.
ಸೇನೆ ವಿರುದ್ಧ ಚೌಕಿದಾರ್‌ ಚೋರ್‌ ಹೇ ಎಂಬ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಸೇನೆ ವಿರುದ್ಧ ಯಾವುದೇ ರೀತಿಯ ಘೋಷಣೆ ಕೂಗಬೇಡಿ, ನಮ್ಮದು ಶಾಂತಿಯುತ ಹೋರಾಟ ಆಗಬೇಕೆಂದು ಆಂತರಿಕ ವ್ಯವಹಾರಗಳ ಮಾಜಿ ಸಚಿವ ಶೇಖ್ ರಶೀದ್ ಮನವಿ ಮಾಡಿಕೊಂಡರು.
ಇನ್ನು ಈ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಇಮ್ರಾನ್‌ ಖಾನ್‌, ಪಾಕಿಸ್ತಾನದ ಪ್ರಧಾನಿಯಾಗಿ ಶಹಬಾಜ್ ಅವರನ್ನು ಜನ ಒಪ್ಪಿಕೊಳ್ಳುವುದಿಲ್ಲ ಎಂದರು. ನೂತನ ಸರ್ಕಾರದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲಾಗುವುದು.ವಿದೇಶಿ ಕುತಂತ್ರದ ವಿರುದ್ಧ ಇಂದಿನಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ಹೋರಾಟ ಆರಂಭವಾಗಲಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬೆಳವಣಿಗೆಯ ವಿರುದ್ಧ ಪಿಐಟಿ ಕಾರ್ಯಕರ್ತರು ಮತ್ತು ಜನರು ಬೀದಿಗಿಳಿದು ಪ್ರತಿಭಟಿಸಬೇಕೆಂದು ಇಮ್ರಾನ್ ಕರೆ ನೀಡಿದರು. ಇಮ್ರಾನ್ ಕರೆಯನ್ನು ಓಗೊಟ್ಟು ಜನ ರಸ್ತೆಗಿಳಿದು ಪ್ರತಿಭಟಿಸಿದರು. ನಮ್ಮ ದೇಶದ ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ರಸ್ತೆಗಿಳಿದಿರುವುದು ಹಿಂದೆಂದೂ ನಾನು ನೋಡಿಲ್ಲ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!