ಕಾಳಿ ಕೈಯಲ್ಲಿ ಸಿಗರೇಟು: ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಳಿ (Kali) ಕೈಯಲ್ಲಿ ಸಿಗರೇಟು (Cigarette) ಕೊಟ್ಟಿರುವ ವಿಚಾರದಲ್ಲಿ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ತಮ್ಮ ಮೇಲಿನ ದೂರುಗಳನ್ನು ವಜಾ ಮಾಡುವಂತೆ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಏರಿದ್ದಾರೆ.

ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿದ್ದಲ್ಲದೇ, ತೃತೀಯ ಲಿಂಗಿಗಳನ್ನು ಸೂಚಿಸುವಂತಹ ಬಾವುಟವನ್ನೂ ಅವರು ಕಾಳಿ ಮಾತೆಯ ಮತ್ತೊಂದು ಕೈಗೆ ಕೊಟ್ಟಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ದಾಖಲಾಗಿತ್ತು.

ಈ ಹಿನ್ನೆಲೆ ತಾವು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಪೋಸ್ಟರ್ ರಚಿಸಿಲ್ಲ, ಆ ಪೋಸ್ಟರ್ ಯಾರಿಗೂ ನೋವು ತರುವಂತಹ ಉದ್ದೇಶ ಹೊಂದಿರಲಿಲ್ಲ . ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆಯೊಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ.

ಜೊತೆಗೆ ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!